ದೇಶ

ಯೋಗದಿಂದ ಅಮಿತ್ ಶಾ 20 ಕೆಜಿ ತೂಕ ಇಳಿದಿದ್ದಾರೆ: ಯೋಗ ಗುರು ರಾಮ್'ದೇವ್

Manjula VN
ನವದೆಹಲಿ: ಯೋಗದಿಂದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 20 ಕೆಜಿ ತೂಕ ಇಳಿಸಿಕೊಂಡಿದ್ದಾರೆಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಮಂಗಳವಾರ ಹೇಳಿದ್ದಾರೆ. 
ಬುಧವಾರ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಏರ್ಪಡಿಸಿದ್ದ ಯೋಗ ಶಿಬಿರದಲ್ಲಿ ಮಾತನಾಡಿರವ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಯೋಗ ಮಾಡುತ್ತಿದ್ದು, ಇದರಿಂದಾಗಿ 20 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಯೋಗಕ್ಕೆ ಧನ್ಯವಾದ ಹೇಳಬೇಕು ಎಂದು ಹೇಳಿದ್ದಾರೆ. 
ಕೆಲವರು ಯೋಗ ಕ್ರೀಡೆಯಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಹೇಳಿಕೆಯನ್ನು ನಾವು ತಿರಸ್ಕರಿಸಬೇಕು. ಯೋಗ ಕೂಡ ಒಂದು ಕ್ರೀಡೆಯಾಗಿದ್ದು, ಒಲಿಂಪಿಕ್ಸ್ ನಲ್ಲಿ ಯೋಗ ಸೇರ್ಪಡೆಗೊಳಿಸಬೇಕೆಂದು. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 
ಇದೇ ವೇಳೆ ದಲಿತ ಸಮುದಾಯದ ನಾಯಕರನಾಗಿರುವ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಆಯ್ಕೆ ಮಾಡಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿರುವ ಅವರು, ರಾಮನಾಥ್ ಅವರು ಹಿಂದೂಳಿದ ಸಮುದಾಯ ಹಾಗೂ ವಂಚಿತರಾದ ಜನರಿಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿಗೆ ಸೂಕ್ತ ವ್ಯಕ್ತಿಯನ್ನು ಬಿಜೆಪಿ ಆಯ್ಕೆ ಮಾಡಿದೆ. ದಲಿತರೆಂಬ ಕಾರಣದಿಂದ ನೋಡುತ್ತಿರುವುದು ವಿರೋಧ ಪಕ್ಷಗಳಲ್ಲಿರುವ ಸಣ್ಣ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT