ದೇಶ

ಕೋವಿಂದ್‌ ಆಯ್ಕೆಗೆ ಅವರ ವಿಶೇಷ ಗುಣಗಳು ಕಾರಣವೇ ಹೊರತು ದಲಿತರೆಂದಲ್ಲ: ಸ್ವಾಮಿ

Vishwanath S
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಈ ಬಾರಿ ರಾಷ್ಟ್ರಪತಿ ಹುದ್ದೆಗೆ ರಾಮ್ ನಾಥ್ ಕೋವಿಂದ್ ದಲಿತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 
ಇನ್ನು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ರಾಮ್ ನಾಥ್ ಕೋವಿಂದ್ ಅವರು ದಲಿತರಾಗಿರಬಹುದು. ಆದರೆ ಅವರು ದಲಿತ ಎಂಬ ಕಾರಣಕ್ಕೆ ರಾಷ್ಟ್ರಪತಿ ಹುದ್ದೆಗೆ ಅವರನ್ನು ಆಯ್ಕೆ ಮಾಡಿಲ್ಲ ಅವರ ವಿಶೇಷ ಗುಣಗಳಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. 
ರಾಷ್ಟ್ರಪತಿ ಹುದ್ದೆಗೆ ರಾಮ್ ನಾಥ್ ಕೋವಿಂದ್ ಅವರಿಗಿಂತ ಉತ್ತಮ ಅಭ್ಯರ್ಥಿ ಬೇರೊಬ್ಬರಿಲ್ಲ. ಅವರು ಅನುಭವ ಮತ್ತು ಹೆಚ್ಚು ಜ್ಞಾನವನ್ನು ಹೊಂದಿದ್ದು ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. 
ವಿಪಕ್ಷಗಳು ರಾಮ್ ನಾಥ್ ಕೋವಿಂದ್ ದಲಿತ ಎಂಬ ಕಾರಣಕ್ಕೆ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ಸುಬ್ರಮಣಿಯನ್ ಸ್ವಾಮಿ ತಳ್ಳಿಹಾಕಿದ್ದಾರೆ. 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕಳೆದ ಸೋಮವಾರ ಎನ್ಡಿಎ ಮೈತ್ರಿಕೂಟ ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮ್ ನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದರು. 
SCROLL FOR NEXT