ದೇಶ

ಆರ್ ಬಿಐ ಗೆ ಹಳೆ ನೋಟ್ ಜಮೆ ಮಾಡಲು ಬ್ಯಾಂಕ್, ಸಹಕಾರಿ ಬ್ಯಾಂಕ್, ಅಂಚೆ ಕಚೇರಿಗಳಿಗೆ ಸರ್ಕಾರ ಅನುಮತಿ

Lingaraj Badiger
ನವದೆಹಲಿ: ಡಿಸೆಂಬರ್ 39, 2016ರೊಳಗೆ ಸಂಗ್ರಹಿಸಿದ್ದ ನಿಷೇಧಿತ 500 ಹಾಗೂ 1000 ರುಪಾಯಿ ನೋಟ್ ಗಳನ್ನು ರಿಸರ್ವೆ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ)ಗೆ ಜಮೆ ಮಾಡಲು ಎಲ್ಲಾ ಬ್ಯಾಂಕ್ ಗಳಿಗೆ, ಸಹಕಾರಿ ಬ್ಯಾಂಕ್ ಗಳಿಗೆ ಹಾಗೂ ಅಂಚೆ ಕಚೇರಿಗಳಿಗೆ ಕೇಂದ್ರ ಸರ್ಕಾರ ಬುಧವಾರ ಅನುಮತಿ ನೀಡಿದೆ.
ಈ ಸಂಬಂಧ ಹಣಕಾಸು ಸಚಿವಾಲಯ ಇಂದು ಪ್ರಕಟಣೆ ಹೊರಡಿಸಿದ್ದು, ಸಹಕಾರಿ ಬ್ಯಾಂಕ್ ಗಳು ಸಹ ಕಳೆದ ನವೆಂಬರ್ 14ರಿಂದ ಸಂಗ್ರಹಿಸಿದ್ದ ಹಳೆ ನೋಟ್ ಗಳನ್ನು ಆರ್ ಬಿಐನೊಂದಿಗೆ ವಿನಿಮಯ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
ಕಳೆದ ವರ್ಷ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ, ಭ್ರಷ್ಟಾಚಾರ ನಿಯಂತ್ರಿಸಲು ಹಾಗೂ ಭಯೋತ್ಪಾದನೆಗೆ ಬಳಕೆಯಾಗುತ್ತಿದ್ದ ಕಪ್ಪು ಹಣಕ್ಕೆ ಕಡಿವಾಣ ಹಾಕಲು 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಿ ಆಘಾತ ನೀಡಿದ್ದರು.
SCROLL FOR NEXT