ದೇಶ

ಯೋಗ ದಿನಾಚರಣೆ ಮೂಲಕ ಭಾರತ 24 ಹೊಸ ವಿಶ್ವ ದಾಖಲೆ ನಿರ್ಮಿಸಿದೆ: ಯೋಗ ಗುರು ಬಾಬಾ ರಾಮ್'ದೇವ್

Manjula VN
ಅಹಮದಾಬಾದ್: ವಿಶ್ವ ಯೋಗ ದಿನಾಚರಣೆ ಮೂಲಕ ಭಾರತ 24 ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಬುಧವಾರ ಹೇಳಿದ್ದಾರೆ. 
ವಿಶ್ವ ಯೋಗ ದಿನಾಚರಣೆಗೆ ಬಿಜೆಪಿ ಪಕ್ಷ ಪಡುತ್ತಿರುವ ಶ್ರಮವನ್ನು ಶ್ಲಾಘಿಸಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಯೋಗ ದಿನ ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಅಮಿತ್ ಶಾ ಅವರ ಮಾರ್ಗದರ್ಶನ ಮತ್ತು ಗುಜರಾತ್ ಸರ್ಕಾರ ಬೆಂಬಲದಿಂದಾಗಿ ಇಂದು ಭಾರತ 24 ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ. 
ಯೋಗ ಭಾರತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಭಾರತ ವಿಶ್ವದೆಲ್ಲೆಡೆ ಯೋಗದ ಪ್ರಾಬಲ್ಯತೆಯನ್ನು ಹೆಚ್ಚಿಸಬೇಕು. ಯೋಗ ದಿನಾಚರಣೆಗಾಗಿ ಸದ್ಯದಲ್ಲಿಯೇ ನಾನು ಅಮೆರಿಕ, ಕೆನಡಾ ದೇಶಗಳಿಗೆ ತೆರಳಲಿದ್ದೇನೆ. ತಂತ್ರಜ್ಞಾನ ಮತ್ತು ಆರ್ಥಿಕತೆ ಸ್ಪರ್ಧೆಗಳ ನಡುವೆಯೂ ಭಾರತ ಯೋಗದ ಮೂಲಕ ವಿಶ್ವದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 
ಸರ್ಕಾರದ ಸಹಾಯ ಹಾಗೂ ಬೆಂಬಲದೊಂದಿದೆ ದೇಶದಾದ್ಯಂತ 11 ಲಕ್ಷ ಉಚಿತ ಯೋಗ ತರಬೇತಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಮುಂದಿನ 3-5 ವರ್ಷಗಳಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ತರಬೇತಿ ಕೇಂದ್ರ ತೆರೆಯುವ ಕುರಿತಂತೆ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಕೂಡ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಪತಾಂಜಲಿ ವತಿಯಿಂದಲೂ ಸಂಪೂರ್ಣ ಬೆಂಬಲವಿರುತ್ತದೆ ಎಂದಿದ್ದಾರೆ. 
ತದನಂತರ ತಮ್ಮ ಯೋಗ ದಿನಗಳ ಪ್ರಯಾಣ ಕುರಿತಂತೆ ಮಾತನಾಡಿದ ಅವರು, ಯೋಗ ದಿನಾಚರಣೆ ಕುರಿತಂತೆ ಮಾಡಿದ ಒಂದು ದಿನದ ಆಲೋಚನೆ ಇಂದು ಇಷ್ಟು ದೊಡ್ಡದ ಯಶಸ್ಸು ಕಾಣುತ್ತದೆ ಎಂದಿಗೂ ಚಿಂತಿಸಿರಲಿಲ್ಲ. ಇಂದಿನ ಯೋಗ ದಿನ ನನ್ನ ಜೀವನದಲ್ಲಿಯೇ ದೊಡ್ಡ ದಿನವಾಗಲಿದೆ. 25 ವರ್ಷಗಳ ಹಿಂದೆ ನನ್ನ ಪ್ರಯಾಣ ಆರಂಭವಾಗಿತ್ತು. ಸೂರತ್ ನಿಂದ ಯೋಗ ದಿನಾಚರಣೆಯನ್ನು ಆರಂಭಿಸಿದ್ದೆ. ಈ ಕಾರ್ಯಕ್ರಮ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುತ್ತದೆ ಎಂದು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT