ದೇಶ

ಪಾಕ್ ಪರ ಘೋಷಣೆ: ಬಂಧಿತ 15 ಮಂದಿಯ ವಿರುದ್ಧದ ದೇಶದ್ರೋಹ ಆರೋಪ ಕೈಬಿಟ್ಟಿ ಮಧ್ಯಪ್ರದೇಶ

Lingaraj Badiger
ಬುರ್ಹಾನ್ಪುರ್: ಲಂಡನ್ ನಲ್ಲಿ ನಡೆದ ಚ್ಯಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನದ ಪರ ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಆರೋಪದ ಮೇಲೆ ಬಂಧಿಸಲಾಗಿದ್ದ 15 ಮುಸ್ಲಿಂ ಯುವಕರ ವಿರುದ್ಧದ ದೇಶದ್ರೋಹದ ಆರೋಪವನ್ನು ಕೈಬಿಡಲು ಮಧ್ಯಪ್ರದೇಶ ಸರ್ಕಾರ ಗುರುವಾರ ನಿರ್ಧರಿಸಿದೆ.
ಎಎನ್ಐ ವರದಿಯ ಪ್ರಕಾರ, ಹಿರಿಯ ಅಧಿಕಾರಿಗಳ ಸಲಹೆ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳ ವಿರುದ್ಧದ ದೇಶದ್ರೋಹ ಪ್ರಕರಣವನ್ನು ಮಧ್ಯಪ್ರದೇಶ ಪೊಲೀಸರು ಹಿಂಪಡೆದಿದ್ದಾರೆ.
ಈ ಮಧ್ಯೆ ಬಂಧಿತ 15 ಆರೋಪಿಗಳ ವಿರುದ್ಧ ಕೋಮು ಸಾಮರಸ್ಯ ಕದಡಲು ಯತ್ನಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷೆನ್ 153ಎ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂನ್ 18ರಂದು ಚ್ಯಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ನಂತರ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದ ಈ 15 ಮಂದಿಯನ್ನು ದೇಶದ್ರೋಹದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.
SCROLL FOR NEXT