ದೇಶ

ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ, ಓರ್ವ ನಾಗರಿಕ ಸಾವು

Lingaraj Badiger
ಪುಲ್ವಂ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೇರಿ ಸೆಕ್ಟರ್ ನಲ್ಲಿ ಗುರುವಾರ ನಿರಂತರ ಆರು ಗಂಟೆಗಳ ಕಾಲ ನಡೆದ ಎನ್ ಕೌಂಟರನ್ ನಲ್ಲಿ ಭಾರತೀಯ ಸೇನೆ ಲಷ್ಕರ್ ಇ ತೋಯಿಬಾ ಉಗ್ರ ಸಂಘಟನೆ ಸೇರಿದ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಈ ವೇಳೆ ಓರ್ವ ನಾಗರಿಕ ಸಹ ಮೃತಪಟ್ಟಿದ್ದಾರೆ.
ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದ ವೇಳೆ ಮೃತಪಟ್ಟ ನಾಗರಿಕ ತಾವ್ಸೀಪ್ ಹಸನ್ ಎಂದು ಗುರುತಿಸಲಾಗಿದ್ದು, ಇತ ಒಬ್ಬ ದೀರ್ಘಕಾಲದ ಕಲ್ಲು ತೂರಾಟಗಾರ ಎಂದು ಪೊಲೀಸರು ತಿಳಿಸಿದ್ದಾರೆ. 
ಹಸನ್ ಒಬ್ಬ ಕಲ್ಲು ತೂರಾಟಗಾರನಾಗಿದ್ದು, ಆತನ ವಿರುದ್ಧ 10 ಕೇಸ್ ಗಳು ದಾಖಲಾಗಿವೆ. ಹಸನ್ ನನ್ನು 2010 ಮತ್ತು 2016ರಲ್ಲಿ ಎರಡು ಬಾರಿ ಬಂಧಿಸಲಾಗಿತ್ತು. ಹಸನ್ ತನ್ನ ಪ್ರದೇಶದಲ್ಲಿ ಛೋಟಾ ಗೀಲಾನಿ ಎಂದೇ ಗುರುತಿಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆ ಕೇರನ್ ಸೆಕ್ಟರ್ ನಲ್ಲಿ ಉಗ್ರರ ಗಡಿ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಅವರು ತಿಳಿಸಿದ್ದಾರೆ.
SCROLL FOR NEXT