ದೇಶ

ಜಾನುವಾರು ಹತ್ಯೆ ಕಾನೂನು; ಎಲ್ಲರನ್ನು ತೃಪ್ತಿಪಡಿಸುತ್ತೇವೆ: ಹರ್ಷ್ ವರ್ಧನ್

Guruprasad Narayana
ನವದೆಹಲಿ: ಜಾನುವಾರು ಮಾರಾಟ ಮತ್ತು ಹತ್ಯೆಯ ಬಗ್ಗೆ ರೂಪಿಸಿರುವ ಹೊಸ ಕಾನೂನಿನ ಬಗ್ಗೆ "ಒಬ್ಬ ವ್ಯಕಿಗೂ ಅತೃಪಿಯಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ" ಎಂದು ಪರಿಸರ ಖಾತೆ ಸಚಿವ ಹರ್ಷ್ ವರ್ಧನ್ ಗುರುವಾರ ಹೇಳಿದ್ದಾರೆ. 
"ಇದು ೫೦ ವರ್ಷ ಹಳೆಯ ಕಾನೂನು ಮತ್ತು ಇದನ್ನು ಬದಲಿಸುವಾಗ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿದ್ದೇವೆ. ಮತ್ತು ಇದರ ಬಗ್ಗೆ ಪ್ರಾತಿನಿಧಿತ್ವವನ್ನು ಪರಿಗಣಿಸುತ್ತಿದ್ದೇವೆ ಮತ್ತು ಸ್ವಾಗತಿಸುತ್ತಿದ್ದೇವೆ.
"ಒಂದು ಸಂಗತಿಯಂತೂ ಸ್ಪಷ್ಟಪಡಿಸುವುದೇನೆಂದರೆ, ಸರ್ಕಾರ ಒಬ್ಬ ವ್ಯಕ್ತಿಯು ಅತೃಪ್ತಿಯಾಗದಂತೆ ನೋಡಿಕೊಳ್ಳುತ್ತದೆ" ಎಂದು ಭಾರತದ ಸಮೀಕ್ಷೆಯ ೨೫೦ನೆ ವರ್ಷದ ಸಂಭ್ರಮಾಚರಣೆಯ ವೇಳೆಯಲ್ಲಿ ಮಾತನಾಡುವಾಗ ಹೇಳಿದ್ದಾರೆ.
ಮೇ ೨೬ ರಂದು ಜಾನುವಾರು ಮಾರಾಟ ಮತ್ತು ಹತ್ಯೆಯ ಮೇಲೆ ಹೊಸ ನಿರ್ಬಂಧ ಹೇರಿ ಕಾನೂನು ಬದಲಿಸಿದ್ದ ಕೇಂದ್ರ ಸರ್ಕಾರ, ಹತ್ಯೆಗಾಗಿ ಜಾನುವಾರುಗಳನ್ನು ವ್ಯಕ್ತಿಗಳು ಕೊಳ್ಳುವುದಕ್ಕೆ ನಿಷೇಧ ಹೇರಿತ್ತು. ಇದು ರಾಷ್ಟ್ರದಾದ್ಯಂತ ತೀವ್ರ ಟೀಕೆಗೆ ಒಳಗಾಗಿತ್ತು. 
SCROLL FOR NEXT