ರಾಮನಾಥ್ ಕೋವಿಂದ್ 
ದೇಶ

ದೇಶ ಮೊದಲು, ರಾಜಕೀಯವಲ್ಲ: ನಾಮಪತ್ರ ಸಲ್ಲಿಕೆ ನಂತರ ಕೋವಿಂದ್ ಹೇಳಿಕೆ

ರಾಷ್ಟ್ರಪತಿ ಹುದ್ದೆ ಎಂಬುದು ಪಕ್ಷ ರಾಜಕಾರಣಕ್ಕಿಂತ ದೊಡ್ಡದು, ನಾನು ಯಾವುದೇ ಒಂದು ಪಕ್ಷಕ್ಕೆ ಸೇರಿದವರಲ್ಲ ಎಂದು ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ...

ನವದೆಹಲಿ: ರಾಷ್ಟ್ರಪತಿ ಹುದ್ದೆ ಎಂಬುದು ಪಕ್ಷ ರಾಜಕಾರಣಕ್ಕಿಂತ ದೊಡ್ಡದು, ನಾನು ಯಾವುದೇ ಒಂದು ಪಕ್ಷಕ್ಕೆ ಸೇರಿದವರಲ್ಲ ಎಂದು ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು. ನಾನು ಗವರ್ನರ್ ಆಗಿದ್ದಾಗಿನಂದಲೂ ಯಾವುದೇ ಪಕ್ಷಕ್ಕೆ ಸೇರಿದವನಾಗಿರಲಿಲ್ಲ, ನನಗೆ ಪಕ್ಷಕ್ಕಿಂತ ದೇಶ ಮುಖ್ಯ ಎಂದು ಹೇಳಿದ್ದಾರೆ.
ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ, ರಾಷ್ಚ್ರಪತಿ ಹುದ್ದೆಯನ್ನು ಪಕ್ಷ ರಾಜಕಾರಣದಿಂದ ಹೊರಗಿಡುತ್ತೇನೆ, ಅಭಿವೃದ್ಧಿಯೆ ನನ್ನ ಪ್ರಥಮ ಆದ್ಯತೆ, ಇದಕ್ಕಾಗಿ ನೀವೆಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೊರತು ಪಡಿಸಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು, ಮೈತ್ರಿ ಇರುವ ರಾಜ್ಯಗಳ ಸಿಎಂಗಳು ಕೂಡ ಕೋವಿಂದ್ ನಾಮ ಪತ್ರ ಸಲ್ಲಿಸುವ ವೇಳೆ ಹಾಜರಿದ್ದರು.
ಪ್ರಾದೇಶಿಕ ಪಕ್ಷಗಳಾದ, ಎಐಎಡಿಎಂಕೆ, ಬಿಜೆಡಿ, ಟಿಆರ್ ಎಸ್, ಜೆಡಿಯು ಈಗಾಗಲೇ ಕೋವಿಂದ್ ಅವರಿಗೆ ತಮ್ಮ ಬೆಂಬಲ  ಸೂಚಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ