ನಾಗಪಟ್ಟಣಂ: ಜಲಗಡಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಶ್ರೀಲಂಕಾ ನೌಕಾಪಡೆ 8 ಭಾರತೀಯ ಮೀನುಗಾರರನ್ನು ಶುಕ್ರವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತೆರೆಲ್ಲರೂ ತಮಿಳುನಾಡು ಮೂಲದವರಾಗಿದ್ದು, ಪರುತಿತುರೈ ಬಳಿ ಜಲಗಡಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮೀನುಗಾರಿಗೆ ನಡೆಸುತ್ತಿದ್ದಾರೆಂದು ಹೇಳಿರುವ ಶ್ರೀಲಂಕಾ ನೌಕಾಪಡೆ 8 ಮೀನುಗಾರರನ್ನು ಬಂಧಿಸಿದೆ.
ಸ್ಥಳದಲ್ಲಿ ಒಂದು ಬೋಟ್'ನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ಬಂಧಿತ ಮೀನುಗಾರರನ್ನು ವಿಚಾರಣೆಗೊಳಪಡಿಸಿದೆ.
ಕಳೆದೆರಡು ದಿನಗಳ ಹಿಂದಷ್ಟೇ ಜಲಗಡಿ ನಿಯಮ ಉಲ್ಲಂಘನೆ ಆರೋಪದ ಮೇಲೆ ನಾಲ್ವರು ಮೀನುಗಾರರನ್ನು ಬಂಧಿಸಿತ್ತು.