ದೇಶ

ವೈದ್ಯಕೀಯ ಪ್ರವೇಶಗಳಿಗೆ ಮೀಸಲಾತಿ ಹಿಂತೆಗೆತ: ಮೇಲ್ವರ್ಗದವರಿಗೆ ಕೋಟಾ ಸೌಲಭ್ಯ

Sumana Upadhyaya
ಚೆನ್ನೈ: ಹಿಂದುಳಿದ ಸಮುದಾಯಗಳಿಗೆ ಇದ್ದ ಮೀಸಲಾತಿ ನಿಯಮಗಳನ್ನು ಹಿಂತೆಗೆದುಕೊಳ್ಳಲಾಗಿದ್ದು, ಅಖಿಲ ಭಾರತ ಕೋಟಾದಡಿ ಅರ್ಧಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ಇದೀಗ ಮೇಲ್ಜಾತಿಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ ಮತ್ತು ಅದು ಮುಕ್ತ ವಿಭಾಗದ ವಿದ್ಯಾರ್ಥಿಗಳಿಗಾಗಿದೆ.
ಮೀಸಲಾತಿ ಮತ್ತು ಮೀಸಲಾತಿರಹಿತ ವಿಭಾಗದ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಈ ವರ್ಷ ಪ್ರತ್ಯೇಕವಾಗಿ ನಡೆಯಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಸಿ.ಕೆ.ಮಿಶ್ರಾ ತಿಳಿಸಿದ್ದಾರೆ.
 ಹಿಂದುಳಿದ ವರ್ಗಗಳು, ಎಸ್ ಸಿ ಮತ್ತು ಎಸ್ ಟಿ ಸಮುದಾಯದಲ್ಲಿನ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶೇಕಡಾ 49.5ರಷ್ಟು ಸೀಟುಗಳು ಮಾತ್ರ ಮೀಸಲಾಗಿಡಲಾಗಿದೆ. ನಿಜವಾಗಿಯೂ ಹಿಂದುಳಿದ ವರ್ಗಗಳಿಗೆ ಕೆಲ ಸೀಟುಗಳು ಮಾತ್ರ ಉಳಿದಿರುತ್ತದೆ. ಸಿಬಿಎಸ್ ಇ ನೀಟ್ ಮಾಹಿತಿ ಬುಲೆಟಿನ್-2017ರಲ್ಲಿ ಇದನ್ನು ನೀಡಲಾಗಿದೆ. ಕೆನೆ ಪದರದ ಮತ್ತು ಕೇಂದ್ರದ ಒಬಿಸಿ ವಿಭಾಗದ ಪಟ್ಟಿಯಲ್ಲಿ ಬಾರದಿರುವವರು ಅವರ ವಿಭಾಗವನ್ನು ಮೀಸಲಾತಿರಹಿತ ಎಂದು ನಮೂದಿಸಬೇಕೆಂದು ಸೂಚಿಸಲಾಗಿದೆ.
ಕಳೆದ ವರ್ಷದವರೆಗೆ ಸಾಮಾನ್ಯ ಅಥವಾ ಇತರ ವರ್ಗಗಳ ಅಭ್ಯರ್ಥಿಗಳು ದೇಶ ಮಟ್ಟದಲ್ಲಿ ರ್ಯಾಂಕ್ ವಿವರಗಳನ್ನು ಹೊಂದುತ್ತಿದ್ದರು. ಆದರೆ ಈ ವರ್ಷ, ಇತರ ವರ್ಗದ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ರ್ಯಾಂಕ್ ಗಳ ಜೊತೆಗೆ ಅವರ ಮೀಸಲಿಡದ ಶ್ರೇಯಾಂಕಗಳನ್ನು ಹೊಂದಿರುತ್ತದೆ.
ಮುಕ್ತ ಕೋಟಾದ ಸೀಟುಗಳು ಭರ್ತಿಯಾದ ನಂತರವಷ್ಟೇ ಮೀಸಲಾತಿ ಸೀಟುಗಳಿಗೆ ಪ್ರವೇಶಾತಿ ನಡೆಯುತ್ತಿತ್ತು. ಈ ಹಿಂದಿನ ಮೀಸಲಾತಿ ನಿಯಮ ಪ್ರಕಾರ, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಕನಿಷ್ಟ ಸಂಖ್ಯೆಯ ಸೀಟುಗಳನ್ನು ನೀಡಲಾಗುತ್ತಿತ್ತು. 
SCROLL FOR NEXT