ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ತುರ್ತುಪರಿಸ್ಥಿತಿ ಕುರಿತು ಹೇಳಿಕೆ: ಪ್ರಧಾನಿ ಮೋದಿ ಬೆನ್ನಿಗೆ ನಿಂತ ಬಿಜೆಪಿ

ತುರ್ತುಪರಿಸ್ಥಿತಿ ಕುರಿತಂತೆ ಹೇಳಿಕೆ ನೀಡಿ ವಿರೋಧ ಪಕ್ಷಗಳ ಟೀಕೆಗಳಿಗೆ ಗುರಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆನ್ನಿಗೆ ಇದೀಗ ಬಿಜೆಪಿ ಬಂದಿದೆ...

ನವದೆಹಲಿ: ತುರ್ತುಪರಿಸ್ಥಿತಿ ಕುರಿತಂತೆ ಹೇಳಿಕೆ ನೀಡಿ ವಿರೋಧ ಪಕ್ಷಗಳ ಟೀಕೆಗಳಿಗೆ ಗುರಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆನ್ನಿಗೆ ಇದೀಗ ಬಿಜೆಪಿ ಬಂದಿದೆ. 
ತುರ್ತುಪರಿಸ್ಥಿತಿ ಹೇಳಿಕೆ ಕುರಿತಂತೆ ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿರುವ ಬಿಜೆಪಿ ನಾಯಕ ಜಿ.ವಿ.ಎಲ್.ನರಸಿಂಹ ರಾವ್ ಅವರು, ಮನ್ ಕಿ ಬಾತ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತುರ್ತುಪರಿಸ್ಥಿತಿ ಕುರಿತಂತೆ ಸಂದೇಶವನ್ನು ನೀಡಿದ್ದು, ತುರ್ತುಪರಿಸ್ಥಿತಿಯೊಂದು ಕರಾಳ ದಿನವಾಗಿದ್ದು, ಅದನ್ನು ಯಾರೂ ಮರೆಯಬಾರದು ಎಂದು ಹೇಳಿದ್ದಾರೆ. ಕಾಂಗ್ರೆಸ್ ಇಂದು ಸದ್ಗುಣಗಳನ್ನು ಪ್ರದರ್ಶಿಸುತ್ತಿದೆ. ಸ್ವತಂತ್ರದ ಮೇಲೆ ಯಾವುದೇ ರೀತಿಯ ನಿಯಂತ್ರಣಗಳಿಲ್ಲ, ಅಸಹಿಷ್ಣುತೆಯಿಲ್ಲ ಎಂದು ಹೇಳುತ್ತಿದೆ. ತುರ್ತುಪರಿಸ್ಥಿತಿ ಹೇರಲು ಪ್ರಮುಖ ಕಾರಣವೇ ಕಾಂಗ್ರೆಸ್. ಜನರಿಗೆ ನಾಗರಿಕ ಹಕ್ಕುಗಳಿಲ್ಲ ಎಂಬುದನ್ನು ಸಾರಿತ್ತು ಎಂದು ಹೇಳಿದ್ದಾರೆ. 
ನಿನ್ನೆಯಷ್ಟೇ 33ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, 45 ವರ್ಷಗಳ ಹಿಂದೆ ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿ ಮರೆಯಲಾಗದ ದಿನವಾಗಿದೆ. 1975ರ ಜೂನ್.25 ತುರ್ತುಪರಿಸ್ಥಿತಿ ಕರಾಳ ದಿನವಾಗಿದ್ದು, ದೇಶಭಕ್ತರು ಭಾರತೀಯರಾರೂ ಮರೆಯಲಾಗದ ದಿನವಾಗಿದೆ. ಇಡೀ ದೇಶವನ್ನು ಜೈಲಾಗಿ ಮಾರ್ಪಾಡಿಸಲಾಗಿತ್ತು. ಮಾಧ್ಯಮಗಳ ಶಕ್ತಿಯನ್ನು ಕಿತ್ತುಕೊಳ್ಳಲಾಗಿತ್ತು. ಅಂದಿನ ದಿನಗಳಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡುವ ಮೂಲಕ ದೇಶ ಹಾಗೂ ಪ್ರತೀಯೊಬ್ಬ ನಾಯಕರು ರಾಷ್ಟ್ರೀಯತೆಯನ್ನು ಸಾಬೀತು ಮಾಡಿದ್ದರು ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

SIR ಅಕ್ರಮ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ