ಮಾರ್ಕ್ ರುಟ್ಟೆ ನೀಡಿರುವ ಉಡುಗೊರೆಯಿಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ತ್ರಿರಾಷ್ಟ್ರ ಪ್ರವಾಸದ ವೇಳೆ ನೆದರ್ಲ್ಯಾಂಡ್'ಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಡಚ್ ಸಹವರ್ತಿ ಮಾರ್ಕ್ ರುಟ್ಟೆ ಅವರು ಅಚ್ಚರಿಯ ಉಡುಗೊರೆಯೊಂದನ್ನು ನೀಡಿದ್ದಾರೆ.
ಮೋದಿಯವರಿಗೆ ಮಾರ್ಕ್ ರುಟ್ಟೆಯವರು ಬೈಸಿಕಲ್ ವೊಂದನ್ನು ಉಡುಗೊರೆಯನ್ನು ನೀಡಿದ್ದು, ಉಡುಗೊರೆ ಕಂಡ ಮೋದಿಯವರು ಚಕಿತಗೊಂಡಿದ್ದಾರೆ.
ಮಾರ್ಕ್ ರುಟ್ಟೆಯವರು ಪ್ರೀತಿಯಿಂದ ನೀಡಿರುವ ಬೈಸಿಕಲ್ ನ್ನು ಮೋದಿಯವರು ಖುಷಿಯಿಂದ ತುಳಿಯುತ್ತಿರುವ ಹಾಗೂ ಪಕ್ಕದಲ್ಲೇ ಮಾರ್ಕ್ ರುಟ್ಟೆ ದೊಡ್ಡದಾಗಿ ನಗುತ್ತಿರುವ ಚಿತ್ರಗಳನ್ನು ಸ್ವತಃ ಮೋದಿಯವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಉಡುಗೊರೆಗಾಗಿ ಮಾರ್ಕ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮೋದಿಯವರು ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲ್ಯಾಂಡ್ ಗೆ ಭೇಟಿ ನೀಡಿ ಇಂದು ತವರಿಗೆ ಬಂದಿದ್ದಾರೆ. ಇಂದು ಬೆಳಿಗ್ಗೆ ಮೋದಿಯವರು ರಾಜಧಾನಿ ದೆಹಲಿಗೆ ಬಂದಿಳಿದರು, ಈ ವೇಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಧಾನಿಯನ್ನು ಬರಮಾಡಿಕೊಂಡರು. ತ್ರಿರಾಷ್ಟ್ರ ಪ್ರವಾದ ಮೇಲೆ ಮೋದಿಯವರು ಪ್ರಮುಖ ದ್ವಿಪಕ್ಷೀಯ ಚರ್ಚೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.