3 ದಿನಗಳ ಯಶಸ್ವಿ ಪ್ರವಾಸದ ಬಳಿಕ ದೆಹಲಿಗೆ ಬಂದಿಳಿದ ಪ್ರಧಾನಿ ಮೋದಿ
ನವದೆಹಲಿ: ಮೂರು ದಿನಗಳ ಯಶಸ್ವಿ ತ್ರಿರಾಷ್ಟ್ರ ಪ್ರವಾಸದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ರಾಜಧಾನಿ ದೆಹಲಿಗೆ ಬಂದಿಳಿದಿದ್ದು, ಹೂಗುಚ್ಛ ನೀಡುವ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸ್ವಾಗತಿಸಿದರು.
ಇಂದು ಬೆಳಿಗ್ಗೆ ರಾಜಧಾನಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಂದಿಳಿಯುತ್ತಿದ್ದಂತೆಯೇ ಸಚಿವ ಸುಷ್ಮಾ ಸ್ವರಾಜ್ ಅವರು ಮೋದಿಯವರನ್ನು ಸ್ವಾಗತಿಸಿದರು.
ಮೂರು ರಾಷ್ಟ್ರಗಳೊಂದಿಗೆ ಸಂಬಂಧ ವೃದ್ದಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂ.24 ರಿಂದ ಮೂರು ದಿನಗಳ ಪ್ರವಾಸ ಆರಂಭಿಸಿದ್ದರು. ಜೂನ್. 24ಕ್ಕೆ ಪೋರ್ಚುಗಲ್ ಗೆ ಭೇಟಿ ನೀಡಿದ ಅವರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದರು.
ಇದಾದ ಬಳಿಕ ಜೂನ್.26 ರಂದು ವಾಷಿಂಗ್ಟನ್ ಗೆ ಭೇಟಿ ನೀಡಿದ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊದಿಗೆ ಮಹತ್ವದ ಮಾತುಕತೆಗಳನ್ನು ನಡೆಸಿದರು. ಮೋದಿ ಹಾಗೂ ಟ್ರಂಪ್ ಭೇಟಿಯನ್ನು ಇದೀಗ ಐತಿಹಾಸಿಕ ಭೇಟಿ ಎಂದೇ ಹೇಳಲಾಗುತ್ತಿದೆ.
ಜೂ.27 ರಂದು ನೆದರಲ್ಯಾಂಡ್ ಗೆ ಭೇಟಿ ನೀಡಿದ ಮೋದಿಯವರು, ನೆದರ್ ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿ ದೆಹಲಿಗೆ ಆಗಮಿಸಿದ್ದಾರೆ.