ದೇಶ

ಜೆಎನ್‌ಯು ವಿದ್ಯಾರ್ಥಿ ನಜೀಬ್‌ ನಾಪತ್ತೆ: ಸಿಬಿಐನಿಂದ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ

Vishwanath S
ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದ ವಿದ್ಯಾರ್ಥಿ ನಜೀಬ್‌ ಅಹ್ಮದ್‌ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ನಜೀಬ್ ಕುರಿತು ಮಾಹಿತಿ ನೀಡಿದರೆ 10 ಲಕ್ಷ ಬಹಮಾನ ನೀಡುವುದಾಗಿ ಘೋಷಿಸಿದೆ. 
2016ರ ಅಕ್ಟೋಬರ್ 16ರಂದು ನಜೀಬ್ ಅಹ್ಮದ್ ಕಣ್ಮರೆಯಾಗಿದ್ದ. ನಂತರ ಆತನ ಪತ್ತೆಗಾಗಿ ದೆಹಲಿ ಪೊಲೀಸರು ಎಷ್ಟೇ ಪ್ರಯತ್ನಿಸಿದರು ಪತ್ತೆ ಪಚ್ಚಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ತನ್ನ ಮಗನನ್ನು ಹುಡುಕುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನಜೀಬ್ ತಾಯಿ ಹೈಕೋರ್ಟ್ ನಲ್ಲಿ ಅಲವತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ಅಲ್ಲದೆ ಪ್ರಕರಣದ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತ್ತು. 
ದೆಹಲಿ ಪೊಲೀಸರು ಸಹ ಈ ಹಿಂದೆ ನಜೀಬ್ ಅಹ್ಮದ್ ಮಾಹಿತಿಗಾಗಿ 1 ಲಕ್ಷ ಬಹುಮಾನ ಘೋಷಿಸಿತ್ತು. 
ಜೂನ್ ನಲ್ಲಿ ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿರುವ ಸಿಬಿಐ ತನಿಖೆ ನಡೆಸುತ್ತಿದೆ. ಆತನ ಸುಳಿವು ಸಿಗದ ಕಾರಣ ಇದೀಗ ಸಿಬಿಐ ಸಹ ಆತನ ಮಾಹಿತಿಗಾಗಿ ಬಹುಮಾನ ಘೋಷಿಸಿದೆ. 
SCROLL FOR NEXT