ಸಮಾಜವಾದಿ ಪಕ್ಷದ ನಾಯಕ ಅಜಂಖಾನ್
ರಾಂಪುರ: ವಿವಾದಗಳಿಂದಲೇ ಸದಾಕಾಲ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಇದೀಗ ಸೇನೆ ವಿರುದ್ಧವೇ ಗಂಭೀರ ಆರೋಪವನ್ನು ಮಾಡಿದ್ದು, ಯೋಧರನ್ನು ಅತ್ಯಾಚಾರಿಗಳೆಂದು ಟೀಕಿಸಿದ್ದಾರೆ.
ರಾಂಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ಅವರು, ಯೋಧರ ತಲೆ, ಕೈ, ಕಾಲುಗಳನ್ನು ಕತ್ತರಿಸುವುದು ಸಾಮಾನ್ಯ. ಗಡಿಯಲ್ಲಿ ಈ ರೀತಿಯ ಹೋರಾಟವಾಗುತ್ತಿರುವುದು ಸಾಮಾನ್ಯ. ಆದರೆ, ಇತ್ತೀಚೆಗೆ ಮಹಿಳಾ ಉಗ್ರರು ಯೋಧರ ಜನನಾಂಗವನ್ನು ಕತ್ತರಿಸುತ್ತಿದ್ದಾರೆ. ಈ ರೀತಿಯ ಹತ್ಯೆ ಮಾಡುವುದರ ಹಿಂದೆಯೂ ಪ್ರಮುಖವಾದ ಕಾರಣಗಳಿವೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಯೋಧನ ಮರ್ಮಾಂಗವನ್ನು ಕತ್ತರಿಸಲಾಗಿದೆ. ಯಾವುದರಿಂದ ಮಹಿಳೆಯರಿಗೆ ತೊಂದರೆ ಆಗುತ್ತಿದೆಯೋ ಅದನ್ನು ಕತ್ತರಿಸುತ್ತಿದ್ದಾರೆ. ಭಾರತಕ್ಕೆ ನಾಚಿಕೆಯಾಗಬೇಕು. ವಿಶ್ವವನ್ನು ಭಾರತ ಯಾವ ಮುಖದಿಂದ ನೋಡುತ್ತದೆ ಎಂದು ಆರೋಪಿಸುವ ಮೂಲಕ ಯೋಧರು ಅತ್ಯಾಚಾರಿಗಳು ಎಂದು ದೂಷಿಸಿದ್ದಾರೆ.
ಅಜಂ ಖಾನ್ ಅವರ ಈ ಹೇಳಿಗೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿದ್ದು, ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಅಜಂಖಾನ್ ಎಂದಿಗೂ ಭಾರತವನ್ನು ತನ್ನ ತಾಯಿ ನಾಡೆಂದು ಪರಿಗಣಿಸಿಲ್ಲ. ಇಂಥ ಹೇಳಿಕೆ ಮೂಲಕ ಅವರು ಉಗ್ರರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಂದು ಕಿಡಿಕಾರಿದ್ದಾರೆ.