ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಭಾರತದ ದೊಡ್ಡ ಕಪಟಿ ಪ್ರಧಾನಿ ಮೋದಿ: ಕಾಂಗ್ರೆಸ್

ಗೋ ಭಕ್ತಿಯ ಹೆಸರಲ್ಲಿ ಮನುಷ್ಯರ ಹತ್ಯೆ ತಪ್ಪು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಯನ್ನು ತಿರಸ್ಕರಿಸಿರುವ ಕಾಂಗ್ರೆಸ್, ಭಾರತದ ದೊಡ್ಡ ಕಪಟಿ ಪ್ರಧಾನಿ ಮೋದಿ ಎಂದು...

ಮುಂಬೈ: ಗೋ ಭಕ್ತಿಯ ಹೆಸರಲ್ಲಿ ಮನುಷ್ಯರ ಹತ್ಯೆ ತಪ್ಪು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಯನ್ನು ತಿರಸ್ಕರಿಸಿರುವ ಕಾಂಗ್ರೆಸ್, ಭಾರತದ ದೊಡ್ಡ ಕಪಟಿ ಪ್ರಧಾನಿ ಮೋದಿ ಎಂದು ಶುಕ್ರವಾರ ಹೇಳಿದೆ. 
ಮೋದಿಯವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಎನ್.ಎ.ಹ್ಯಾರಿಸ್, ಗೋಹತ್ಯೆ ವಿಚಾರಗಳ ಕುರಿತಂತೆ ಹೇಳಿಕೆ ನೀಡುವ ಬಹದಲು ಪ್ರಧಾನಮಂತ್ರಿಗಳು ಮೊದಲು ಸಮಾಜ ವಿರೋಧಿಗಳನ್ನು ಹಿಡಿದು ಜೈಲಿಗಟ್ಟಬೇಕು ಎಂದು ಹೇಳಿದ್ದಾರೆ. 
ದೇಶದ ದೊಡ್ಡ ಕಪಟಿಯೇ ಪ್ರಧಾನಿ ಮೋದಿ. ಅವರು ಹೇಳುವುದೇ ಒಂದು, ಮಾಡುವುದೇ ಇನ್ನೊಂದು. ಮಾತನಾಡುವ ಬದಲು ಮೋದಿಯವರು ಗೋರಕ್ಷಕರನ್ನು ಹಿಡಿದು ಜೈಲಿಗೆ ಕಳುಹಿಸಬೇಕು. ಗೋರಕ್ಷಕರು ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಗೋವುಗಳನ್ನು ಯಾರು ಮಾರುತ್ತಿದ್ದಾರೆ, ಯಾರು ಕೊಳ್ಳುತ್ತಿದ್ದಾರೆ. ಇದನ್ನು ಕಂಡು ಹಿಡಿಯಲು ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರಬೇಕಿದೆ. 
ಮೋದಿ ನಿಜಕ್ಕೂ ಗೋವುಗಳನ್ನು ಪ್ರೀತಿಸುವುದೇ ಆದರೆ, ಗೋವುಗಳ ರಫ್ತು ಮಾಡುವುದನ್ನು ನಿಲ್ಲಿಸಲಿ. ಏಕಕಾಲದಲ್ಲಿ ಗೋಹತ್ಯೆಯನ್ನು ನಿಷೇಧಿಸಲಿ. ಈ ವಿಚಾರ ಹಿಂದೂ ಮತ್ತು ಮುಸ್ಲಿಮರ ವಿಚಾರವಲ್ಲ. ಮನುಷ್ಯನ ಜೀವನಕ್ಕೆ ಸಂಬಂಧಿಸಿದ್ದು. ಅದಕ್ಕೆ ನಾವು ಬೆಲೆ ಕೊಡಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆ 271 ಕೋಟಿಗೆ ಮಾರಾಟ!

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಿದ್ದ ಟೆಕ್ಕಿ ನಾಪತ್ತೆ: ಲ್ಯಾಪ್‌ಟಾಪ್‌ನಲ್ಲಿ ಶಾಂತಲಾ ಡ್ರಾಪ್‌ ಪಾಯಿಂಟ್‌ ಸರ್ಚ್‌; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ: 13 ಮಂದಿ ಬಲಿ, 75 ಜನರಿಗೆ ಗಾಯ; ಇದು 4 ವರ್ಷಗಳಲ್ಲೇ ಅತ್ಯಂತ ಡೆಡ್ಲಿ ಅಟ್ಯಾಕ್!