ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಖ್ಯಾತ ಗಾಯಕಿ ಸೂಲಮಂಗಲಂ ಜಯಲಕ್ಷ್ಮಿ ವಿಧಿವಶ

ಪ್ರಸಿದ್ಧ ಗಾಯಕಿ ಸೂಲಮಂಗಲಂ ಜಯಲಕ್ಷ್ಮಿ (80) ಗುರುವಾರ ನಿಧನರಾಗಿದ್ದಾರೆ....

ಜಯಲಕ್ಷ್ಮಿ
Shilpa D
Updated On : 30 Jun 2017, 10:42 am
ಚೆನ್ನೈ: ಪ್ರಸಿದ್ಧ ಗಾಯಕಿ ಸೂಲಮಂಗಲಂ ಜಯಲಕ್ಷ್ಮಿ (80) ಗುರುವಾರ  ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ನಿನ್ನೆ ರಾತ್ರಿ ಜಯಲಕ್ಷ್ಮಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಇಚ್ಛೆಯಂತೆ ದೇಹವನ್ನು ಆಸ್ಪತ್ರೆಗೆ ನೀಡಲಾಗಿದೆ. ಯಲಕ್ಷ್ಮಿ ಮತ್ತು ಅವರ ಕಿರಿಯ ಸಹೋದರಿ ರಾಜಲಕ್ಷ್ಮಿ ಅವರು ಭಕ್ತಿಗೀತೆಗಳಿಗೆ ಪ್ರಸಿದ್ಧರಾಗಿದ್ದರು.
ಸೂಲಮಂಗಲಂ ಸಹೋದರರಿಯರು ಎಂದೇ ಖ್ಯಾತಿ ಪಡೆದಿದ್ದರು.  1992 ರಲ್ಲಿ ಜಯಲಕ್ಷ್ಮಿ ಅವರ ಸಹೋದರಿ ನಿಧನರಾಗಿದ್ದರು. ಇಬ್ಬರೂ ರಾಜ್ಯ ಸರ್ಕಾರದ ಕಲೈಮಾಮನಿ ಪ್ರಶಸ್ತಿಗೆ ಭಾಜನರಾಗಿದ್ದರು. ಅನೇಕ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಅದರಲ್ಲೂ ಸುಬ್ರಮಣ್ಯ ದೇವರ ಗೀತೆಗಳನ್ನು ಹಾಡುವ ಮೂಲಕ ಪ್ರಸಿದ್ದರಾಗಿದ್ದರು. 

Advertisement

Advertisement

ತಂಜಾವೂರಿನ ಸಮೀಪವಿರುವ ಸೂಲಮಂಗಲಂ ಕರ್ಣಮ್ ರಾಮಸ್ವಾಮಿ ಅಯ್ಯರ್ ಮತ್ತು ಜಾನಕಿ ಅಮ್ಮಾಳ್ ದಂಪತಿಯ ಪುತ್ರಿಯರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement