ದೇಶ

ಕುಲಭೂಷಣ್ ಜಾಧವ್ ಪ್ರಕರಣ: ಪಾಕಿಸ್ತಾನದಿಂದ ಮತ್ತೆ ರಾಜತಾಂತ್ರಿಕ ನೆರವು ಕೋರಿದ ಭಾರತ

Sumana Upadhyaya
ನವದೆಹಲಿ: ಪಾಕಿಸ್ತಾನದ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಮತ್ತು ಮುಂಬೈ ನಿವಾಸಿ ಹಮೀದ್ ನೆಹಲ್ ಅನ್ಸಾರಿ ಅವರ ಬಿಡುಗಡೆಗೆ ರಾಜತಾಂತ್ರಿಕ ನೆರವು ನೀಡಬೇಕೆಂದು  ಭಾರತ ಇಂದು ಪಾಕಿಸ್ತಾನವನ್ನು ಕೋರಿದೆ.
ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ನೆರವು ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ ತಮ್ಮ ದೇಶದ ಜೈಲುಗಳಲ್ಲಿ ಬಂಧಿಯಾಗಿರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡವು. 
ವಿದೇಶಾಂಗ ಸಚಿವಾಲಯದ ಹೇಳಿಕೆಯಂತೆ, ಮಾನವೀಯತೆ ವಿಷಯಗಳನ್ನು ಆದ್ಯತೆ ಮೇರೆಗೆ ಪಾಕಿಸ್ತಾನಕ್ಕೆ ಒದಗಿಸಲು ಭಾರತ ಬದ್ಧವಾಗಿದೆ. ಕೈದಿಗಳು ಮತ್ತು ಮೀನುಗಾರರನ್ನು ಬಿಡುಗಡೆ ಮಾಡುವುದು ಕೂಡ ಅದರಲ್ಲಿ ಸೇರಿಕೊಂಡಿದೆ. ಈ ವಿಷಯದಲ್ಲಿ ಪಾಕಿಸ್ತಾನದ ಜೈಲುಗಳಲ್ಲಿ ಬಂಧಿತರಾಗಿರುವ ಭಾರತೀಯ ಕೈದಿಗಳ ಬಿಡುಗಡೆ ಮತ್ತು ವಾಪಸಾತಿಗೆ ನಾವು ಪಾಕಿಸ್ತಾನದ ದೃಢೀಕರಣಕ್ಕೆ ಕಾಯುತ್ತಿದ್ದೇವೆ ಎಂದು ಹೇಳಿದೆ.
ರಾಜತಾಂತ್ರಿಕ ನೆರವು ಒಪ್ಪಂದ ಭಾರತ ಮತ್ತು ಪಾಕಿಸ್ತಾನ ನಡುವೆ ಮೇ 21, 2008ರಲ್ಲಿ ಏರ್ಪಟ್ಟಿತ್ತು. ಅದರ ಪ್ರಕಾರ, ಎರಡೂ ದೇಶಗಳ ಜೈಲಿನಲ್ಲಿ ಬಂಧಿಯಾಗಿರುವ ಆಯಾ ದೇಶದ ಕೈದಿಗಳನ್ನು ಆದ್ಯತೆ ಮೇರೆಗೆ ವರ್ಷದಲ್ಲಿ ಎರಡು ಬಾರಿ ವಿನಿಮಯ ಮಾಡಿಕೊಳ್ಳಬೇಕು. ಅದು ಪ್ರತಿವರ್ಷ ಜನವರಿ 1 ಮತ್ತು ಜುಲೈ 1ರಂದು ಆಗಿದೆ.
SCROLL FOR NEXT