ದೇಶ

ತಮ್ಮ ಹಕ್ಕುಗಳನ್ನು ಪಡೆಯಲು ಮುಸ್ಲಿಂ ಮಹಿಳೆಯರು ಮುಂದೆ ಬರಬೇಕು: ಯೋಗಿ ಆದಿತ್ಯನಾಥ್

Shilpa D
ಲಕ್ನೋ: 100 ದಿನಗಳ ಆಡಳಿತ ಪೂರೈಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತ್ರಿವಳಿ ತಲಾಖ್ ಎಂಬುದು ಸಾಮಾಜಿಕ ಸಮಸ್ಯೆಯಾಗಿದ್ದು, ಮುಸ್ಲಿಂ ಸಮುದಾಯ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೇ ಬಹಳ ಉತ್ತಮ ಎಂದು ಹೇಳಿದ್ದಾರೆ.
ಖಾಸಗಿ ಚಾನೆಲ್ ವೊಂದರ ಸಂದರ್ಶನವೊಂದರಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಮಹಿಳೆ ಮತ್ತು ಪುರುಷರ ಅನುಪಾತದಲ್ಲಿ ಭಾರಿ ವ್ಯತ್ಯಾಸವಿದ್ದು, ಲಿಂಗ ಅನುಪಾತ ಕಡಿಮೆಯಾಗಬೇಕು ಎಂದು ಹೇಳಿದ ಅವರು ಮುಸ್ಲಿಂ ಮಹಿಳೆಯರು ತಮ್ಮ ತಮ್ಮ ಹಕ್ಕುಗಳನ್ನು ಪಡೆಯಲು ಮುಂದೆ ಬರಬೇಕು ಎಂದು ಕರೆ ನೀಡಿದ್ದಾರೆ.
ಕೇಂದ್ರ ವಕ್ಫ್ ಮಂಡಳಿಗೆ ಕೆಲವೊಂದು ಶಿಫಾರಸು ಮಾಡಿದ್ದು, ಅವುಗಳು ಅನುಷ್ಠಾನಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. 
ತಮ್ಮ 100 ದಿನಗಳ ಸರ್ಕಾರದ ಆಡಳಿತದಲ್ಲಿ ತೃಪ್ತಿ ಕಂಡಿದ್ದು, ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗಾಗಿ ಯಾವುದೇ ತಾರತಮ್ಯ ಮಾಡದೇ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ. 
SCROLL FOR NEXT