ದೇಶ

ಶೀಘ್ರದಲ್ಲೇ ಆನ್ ಲೈನ್ ಮೂಲಕ ರೈಲು ಟಿಕೆಟ್ ಬುಕ್ ಮಾಡಲು ಆಧಾರ ಕಡ್ಡಾಯ

Lingaraj Badiger
ನವದೆಹಲಿ: ಬಲ್ಕ್ ಟಿಕೆಟ್ ಬ್ಲಾಕ್ ಮಾಡುವ ದಲ್ಲಾಳಿಗಳಿಗೆ ಕಡಿವಾಣ ಹಾಕಲು ಹಾಗೂ ಮೋಸದ ಬಕ್ಕಿಂಗ್ ಅನ್ನು ತಡೆಯುವುದಕ್ಕಾಗಿ ರೇಲ್ವೆ ಇಲಾಖೆ ಶೀಘ್ರದಲ್ಲೇ ಆಧಾರ್ ಆಧಾರಿತ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಟಿಕೆಟ್ ದರದಲ್ಲಿ ರಿಯಾಯ್ತಿ ಪಡೆಯಲು ಹಿರಿಯ ನಾಗರಿಕರಿಗೆ ಏಪ್ರಿಲ್ 1ರಿಂದ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದ್ದು, ಇದು ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಜಾರಿಯಲ್ಲಿರಲಿದೆ. ಬಳಿಕ ಅದನ್ನು ಎಲ್ಲರಿಗೂ ವಿಸ್ತರಿಸುವ ಸಾಧ್ಯತೆ ಇದೆ.
ಇಂದು 2017-18ನೇ ಸಾಲಿನ ಹೊಸ ವ್ಯವಹಾರಿಕ ಯೋಜನೆಗಳನ್ನು ಪ್ರಕಟಿಸಿದ ರೇಲ್ವೆ ಸಚಿವ ಸುರೇಶ್ ಪ್ರಭು ಅವರು, ಶೀಘ್ರದಲ್ಲೇ ಆಧಾರ್ ಆಧಾರಿತ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಅಲ್ಲದೆ ನಗದು ರಹಿತ ವ್ಯವಹಾರಕ್ಕಾಗಿ ರೇಲ್ವೆ 6 ಸಾವಿರ ಪಿಒಎಸ್ ಮಷಿನ್ ಗಳನ್ನು ಒದಗಿಸಲಾಗುವುದು ಮತ್ತು ದೇಶಾದ್ಯಂತ ಒಂದು ಸಾವಿರ ಆಟೋಮೆಟಿಕ್ ಟಿಕೆಟ್ ಮಷಿನ್ ಗಳನ್ನು ಸ್ಥಾಪಿಸಲಾಗುವುದು ಎಂದರು.
ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶೀಘ್ರದಲ್ಲಿ ಸಮಗ್ರ ಟಿಕೆಟ್ ಬುಕ್ಕಿಂಗ್ ಆಪ್ ಅನ್ನು ಬಿಡುಗಡೆ ಮಾಡವುದಾಗಿ ಸಚಿವರು ತಿಳಿಸಿದ್ದಾರೆ.
SCROLL FOR NEXT