ನವದೆಹಲಿ: ಮುಸಲ್ಮಾನರ ಜನಸಂಖ್ಯೆ ವಿಶ್ವದಾದ್ಯಂತ ಶರವೇಗದಲ್ಲಿ ಹೆಚ್ಚಾಗುತ್ತಿದ್ದು, ಇದೇ ರೀತಿಯಲ್ಲಿ ವೃದ್ಧಿಯಾದರೆ 2050ರೊಳಗೆ ಭಾರತ ಜಗತ್ತಿನಲ್ಲಿಯೇ ಅತೀದೊಡ್ಡ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆ.
ಅಮೆರಿಕದ ಪಿಇಡಬ್ಲ್ಯೂ ಈ ಬಗ್ಗೆ ವರದಿ ಮಾಡಿದೆ. ವಿಶ್ವದ ಪ್ರಮುಖ ಧರ್ಮಗಳ ಜನಸಂಖ್ಯೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ವಿಶ್ಲೇಷನೆ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ. ವರದಿಯಲ್ಲಿ 2070ರೊಳಗೆ ಜಗತ್ತಿನಲ್ಲಿ ಕ್ರೈಸ್ತ ಧರ್ಮವನ್ನು ಹಿಂದಿಕ್ಕುವ ಮುಸ್ಲಿಮರು ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನಕ್ಕೇರಲಿದ್ದಾರೆಂದು ಹೇಳಿಕೊಂಡಿದೆ.
ಪ್ರಸ್ತುತ ವಿಶ್ವದಲ್ಲಿಯೇ ಅತಿ ಹೆಚ್ಚು ಮುಸ್ಲಿಮರು ನೆಲೆಸಿರುವ ದೇಶ ಇಂಡೋನೇಷ್ಯಾ ಆಗಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಮುಸ್ಲಿಮರದ್ದು ಎರಡನೇ ಸ್ಥಾನ. ಸದ್ಯ ಕ್ರೈಸ್ತರದ್ದು ನಂ.1 ಸ್ಥಾನ ಆಗಿದ್ದರೂ, ಜನಸಂಖ್ಯಾ ವೃದ್ಧಿ ವಿಷಯದಲ್ಲಿ ಮುಸ್ಲಿಮರು ಇತರೆಲ್ಲಾ ಧರ್ಮದವರಿಗಿಂತ ಮುಂಜೂಣಿಯಲ್ಲಿದ್ದಾರೆ. ಮುಸ್ಲಿಂ ಜನಸಂಖ್ಯೆ ಇದೇ ವೇಗದಲ್ಲಿ ಹೆಚ್ಚುತ್ತಾ ಹೋದರೆ, 2050ರ ವೇಳೆಗೆ ಭಾರತದದಲ್ಲಿರುವ ಮುಸಲ್ಮಾನರ ಸಂಖ್ಯೆ 30 ಕೋಟಿಗೆ ಏರಿಕೆಯಾಗಲಿದೆ ಎಂದು ಪ್ಯೂ ವರದಿಯಲ್ಲಿ ತಿಳಿಸಿದೆ.
2010ರಿಂದ 2050ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.73 ರಷ್ಟು ಹೆಚ್ಚಳ ಕಂಡರೆ, ಕ್ರೈಸ್ತರು ಸಂಖ್ಯೆ ಶೇ.35 ರಷ್ಟು ವೃದ್ಧಿಯಾಗಲಿದೆ. 2010ರಲ್ಲಿ 160 ಕೋಟಿ ಮುಸ್ಲಿಮರು, 2017 ಕೋಟಿ ಕ್ರೈಸ್ತರು ಇದ್ದರು, 2050ರೊಳಗೆ ಮುಸ್ಲಿಮರ ಸಂಖ್ಯೆ 280 ಕೋಟಿಗೆ ಹಾಗೂ ಕ್ರೈಸ್ತರದ್ದು 292 ಕೋಟಿಗೆ ಏರಿಕೆಯಾಗಲಿದೆ.