ದೇಶ

ಅಪ್ರಾಪ್ತೆ ಮೇಲೆ ಪಾದ್ರಿಯಿಂದ ಅತ್ಯಾಚಾರ: 5 ಸನ್ಯಾಸಿನಿಯರು ಸೇರಿದಂತೆ 12 ಮಂದಿ ವಿರುದ್ಧ ದೂರು

Shilpa D

ಕೊಚ್ಚಿ: ಮಹತ್ವದ ಬೆಳವಣಿಗೆಯೊಂದರಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರಮುಖ ಆರೋಪಿ ಕಣ್ಣೂರಿನ ಕ್ಯಾಥೋಲಿಕ್ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣ ಸಂಬಂಧ ಐವರು ಸನ್ಯಾಸಿನಿಯರು ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೋಲೀಸರು ಬಂಧಿತ ಇಬ್ಬರು ಮಹಿಳೆಯರ ಹೇಳಿಕೆ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.

ಮಕ್ಕಳ ಹೆಲ್ಪ್ ಲೈನ್ ಗೆ ಬಂದ ಅನಾಮಧೇಯ ಕರೆಯ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಕಣ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿ ಮಗುವಿಗೆ ಜನ್ಮ ನೀಡಿ 1 ತಿಂಗಳು ಕಳೆದಿದೆ. ಅಪರಾಧ ಪ್ರಕರಣವನ್ನು ಅಲ್ಲಿದ್ದ ಸನ್ಯಾಸಿನಿಯರು ಮುಚ್ಚಿಟ್ಟಿದ್ದರು ಎಂದು ಆರೋಪಿಸಲಾಗಿದೆ.

ಕಣ್ಣೂರು ಜಿಲ್ಲೆಯ ಕೊಟ್ಟಿಯೂರ್ ನ ಸೇಂಟ್ ಸೆಬಾಸ್ಟಿಯನ್ ಚರ್ಚ್ ನ ಪಾದ್ರಿ  ರಾಬಿನ್ ವಡಕ್ಕುಂಚೆರಿ ಆರೋಪಿಯಾಗಿದ್ದು, ಕೆನಾಡಾಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಆತನನ್ನು ಬಂಧಿಸಿದ್ದು, ನ್ಯಾಯಾಂಗ  ಬಂಧನದಲ್ಲಿಡಲಾಗಿದೆ.

SCROLL FOR NEXT