ರಾಮೇಶ್ವರಂ: ಅಂತಾರಾಷ್ಟ್ರೀಯ ಕಡಲ ಗಡಿರೇಖೆಯನ್ನು ದಾಟಿ ಹೋಗಿ ಶ್ರೀಲಂಕಾ ದ್ವೀಪ ರಾಷ್ಟ್ರದ ಪ್ರದೇಶದ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ 24 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಭಾನುವಾರ ಬಂಧಿಸಿದೆ.
ಶ್ರೀಲಂಕಾದ ಕಚತಿವು ಮತ್ತು ತಲೈಮನ್ನಾರ್ ಮಧ್ಯೆ ಮೀನುಗಾರಿಕೆ ಮಾಡುತ್ತಿದ್ದ 15 ಮೀನುಗಾರರನ್ನು ಬಂಧಿಸಿ ತಲೈಮನ್ನಾರ್ ಗೆ ಕರೆದೊಯ್ಯಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕುಲಂಜಿನಾಥನ್ ತಿಳಿಸಿದ್ದಾರೆ.
ನೆಡುಂತೀವು ಹತ್ತಿರ ಮೀನುಗಾರಿಕೆ ನಡೆಸುತ್ತಿದ್ದ ಇತರ 9 ಮಂದಿಯನ್ನು ಬಂಧಿಸಿ ಕಂಗಸಂತುರೈಗೆ ಕರೆದೊಯ್ಯಲಾಯಿತು. ಮೀನುಗಾರರ ಬಳಿಯಿಂದ ನಾಲ್ಕು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.