ನವದೆಹಲಿ: ನೋಟು ನಿಷೇಧಕ್ಕೂ ಮುನ್ನ ಅರುಣ್ ಜೇಟ್ಲಿ ಅವರನ್ನು ಸಂಪರ್ಕಿಸಲಾಗಿತ್ತೇ ಎಂಬ ಆರ್ ಟಿಐ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಹಣಕಾಸು ಸಚಿವಾಲಯ, ಆ ಬಗ್ಗೆ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಅರುಣ್ ಜೇಟ್ಲಿ ಹಾಗೂ ಮುಖ್ಯ ಆರ್ಥಿಕ ಕಾರ್ಯದರ್ಶಿಗಳನ್ನು ನೋಟು ನಿಷೇಧಕ್ಕೂ ಮುನ್ನ ಸಂಪರ್ಕಿಸಿ, ಮಾಹಿತಿ ನೀಡಲಾಗಿತ್ತೇ ಎಂಬ ಆರ್ ಟಿಐ ಪ್ರಶ್ನೆಗೆ ಉತ್ತರಿಸುವುದು ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಈ ಹಿಂದೆ ಪ್ರಧಾನಿ ಕಾರ್ಯಾಲಯ ಹಾಗೂ ಆರ್ ಬಿಐ ಸ್ಪಷ್ಟಪಡಿಸಿತ್ತು.
ಪಿಟಿಐ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರ್ ಟಿಐ ಪ್ರಶ್ನೆಯನ್ನು ಕೇಳಿತ್ತು. ಆದರೆ ಆರ್ ಟಿಐ ನ ಸೆಕ್ಷನ್ 8 (1) (a) ಅಡಿಯಲ್ಲಿ ಮಾಹಿತಿ ನೀಡಲು ನಿರಾಕರಿಸಿದೆ. ಭಾರತದ ಸಾರ್ವಭೌಮತ್ವ, ಭದ್ರತೆ, ಕಾರ್ಯತಂತ್ರ, ಆರ್ಥಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗಬಹುದಾದ ಮಾಹಿತಿಗಳನ್ನು ಸೆಕ್ಷನ್ 8(1) (a) ಅಡಿಯಲ್ಲಿ ನಿರಕಾರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿಯನ್ನು ನಿರಾಕರಿಸಿದೆ.