ನವದೆಹಲಿ: ಆಧಾರ್ ಮಾಹಿತಿಗಳು ದುರುಪಯೋಗವಾಗಿದೆ ಎಂಬ ವರದಿಯನ್ನು ಕೇಂದ್ರ ತಳ್ಳಿಹಾಕಿದ್ದು, ಆಧಾರ್ ಮಾಹಿತಿಗಳು ಸುರಕ್ಷಿತ ಹಾಗೂ ಗೌಪ್ಯವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಆಧಾರ್ ಬಯೋಮೆಟ್ರಿಕ್ಸ್ ನ ಮಾಹಿತಿ ಸೋರಿಕೆ ಮತ್ತು ಆರ್ಥಿಕ ನಷ್ಟವಾಗಿದೆ ಎಂಬ ವರದಿಗಳು ಸುಳ್ಳು ಎಂದು ಭಾರತ ವಿಶೇಷ ಗುರುಚಿನ ಚೀಟಿ ಪ್ರಾಧಿಕಾರ ತಿಳಿಸಿದೆ. ಅಲ್ಲದೆ, ಸಹಾಯ ಧನವನ್ನು ಆಧಾರ್ ಗೆ ಜೋಡಣೆ ಮಾಡಿರುವುದಿರಂದಾಗಿ ಕಳೆದ ಎರಡುವರೆ ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ರೂ.49,000 ಕೋಟಿ ಉಳಿತಾಯವಾಗಿದೆ. ಈ ವಹಿವಾಟಿನ ಪ್ರಕ್ರಿಯೆಯಲ್ಲಿ ಬಳಕೆದಾರರ ಮಾಹಿತಿ ಕದ್ದ ಯಾವುದೇ ಪ್ರಕರಣಗಳು ನಡೆಸದಿಲ್ಲ, ನಷ್ಟವೂ ಉಂಟಾಗಿಲ್ಲ ಎಂದು ಹೇಳಿದೆ.
ಆಧಾರ್ ಗೆ ಸಂಬಂಧಿಸಿದಂತೆ ಪ್ರಟಕವಾಗಿರುವ ವರದಿಗಳನ್ನು ಯುಐಡಿಎಐ (ಭಾರತೀಯ ವಿಶೇಷ ಗುರುಚಿನ ಚೀಟಿ ಪ್ರಾಧಿಕಾರ) ಎಚ್ಚರಿಕೆಯಿಂದ ಪರಿಶೀಲನೆ ನಡೆಸಲಿದೆ. ಯುಐಡಿಎಐ ದತ್ತಾಂಶಕ್ಕೆ ಯಾರೂ ಮೋಸ ಮಾಡಿಲ್ಲ. ಯುಐಡಿಎಐ ವಶದಲ್ಲಿರುವ ಜನರ ವೈಯಕ್ತಿಕ ಮಾಹಿತಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಹೀಗಾಗಿ ಯಾರೊಬ್ಬರ ಭಯ ಪಡಬೇಕಾಗಿಲ್ಲ. ಬ್ಯಾಂಕ್ ಗಳೊಂದಿಗೆ ಕೈಜೋಡಿಸಿಕೊಂಡು ವಾಣಿಜ್ಯ ವ್ಯವಹಾರ ನಡೆಸುವ ಕಂಪನಿಗಳಿಗೆ ಮಾಹಿತಿ ನೀಡುವಾಗ ಗ್ರಾಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.