ದೇಶ

ವಿಶ್ವದ ಅತ್ಯಂತ ಹಳೆಯ ವಿಮಾನ ವಾಹಕ ಐಎನ್ಎಸ್ ವಿರಾಟ್ ಇಂದು ನಿವೃತ್ತಿ

Sumana Upadhyaya
ಮುಂಬೈ: ವಿಶ್ವದ ಅತ್ಯಂತ ಹಳೆಯ ವಿಮಾನ ವಾಹಕ ಐಎನ್ಎಸ್ ವಿರಾಟ್ ಇಂದು ತನ್ನ ಕಾರ್ಯವನ್ನು ನಿಲ್ಲಿಸಲಿದೆ. ಮುಂಬೈಯಲ್ಲಿ ಇಂದು ಅದಕ್ಕೆ ವಿದ್ಯುಕ್ತ ಬೀಳ್ಕೊಡುಗೆ ನೀಡಲಾಗುತ್ತಿದೆ. ಈ ಮೂಲಕ ಭಾರತೀಯ ನೌಕಾಪಡೆಯ ಇತಿಹಾಸದಲ್ಲಿ ಅಮೋಘ ಅಧ್ಯಾಯವೊಂದು ಅಂತ್ಯವಾಗಲಿದೆ. 
ಸುಮಾರು ಮೂರು ದಶಕಗಳ ಕಾಲ ಐಎನ್ಎಸ್ ವಿರಾಟ್ ದೇಶಕ್ಕೆ ಸೇವೆ ಸಲ್ಲಿಸಿತ್ತು. ಬೀಳ್ಕೊಡುಗೆ ಸಮಾರಂಭದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಐಎನ್ಎಸ್ ವಿರಾಟ್ 1987ರಲ್ಲಿ ಭಾರತೀಯ ನೌಕಾಪಡೆಗೆ ಸೇರಿತ್ತು. ಅದಕ್ಕೂ ಮುನ್ನ ರಾಯಲ್ ಬ್ರಿಟಿಷ್ ನೌಕಾಪಡೆಯಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ 1943ರ ಹೊತ್ತಿನಲ್ಲಿ ಇದನ್ನು ಕಟ್ಟಲಾಗಿತ್ತು. ದೇಶದಲ್ಲಿ ಹಲವು ಆತಂಕ, ಉದ್ವಿಗ್ನದ ಸಂದರ್ಭಗಳಲ್ಲಿ ಐಎನ್ಎಸ್ ವಿರಾಟ್ ರಕ್ಷಣೆ ನೀಡಿತ್ತು.
SCROLL FOR NEXT