ದೇಶ

ಉ.ಪ್ರದೇಶ ಕೊನೆ ಹಂತದ ಚುನಾವಣೆ: ಶೇ.60.3ರಷ್ಟು ಮತದಾನ, ಮಾ.11ಕ್ಕೆ ಫಲಿತಾಂಶ

Lingaraj Badiger
ಲಖನೌ: ಉತ್ತರ ಪ್ರದೇಶ ವಿಧಾನಸಭೆಯ ಏಳನೇ ಹಂತದ ಹಾಗೂ ಕೊನೆ ಹಂತದ ಚುನಾವಣೆ ಬುಧವಾರ ಮುಕ್ತಾಯಗೊಂಡಿದ್ದು, ಶೇ.60.3ರಷ್ಟು ಮತದಾನವಾಗಿದೆ.
ಇಂದು ಒಟ್ಟು 40 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 1.41 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.60.03ರಷ್ಟು ಮತದಾನವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯ ಚುನಾವಣಾ ಆಯುಕ್ತ ಟಿ.ವೆಂಕಟೇಶ್ ಅವರು ತಿಳಿಸಿದ್ದಾರೆ.
ಫೆಬ್ರವರಿ 11ರಿಂದ ನೆಡದ ಒಟ್ಟು ಏಳು ಹಂತಗಳ ಚುನಾವಣೆಯಲ್ಲಿ ಈ ವರ್ಷ ಶೇ.60.61ರಷ್ಟು ಮತದಾನವಾಗಿದೆ. ಕಳೆದ 2012ರ ಚುನಾವಣೆಯಲ್ಲಿ ಶೇ.59.48ರಷ್ಟು ಮತದಾನವಾಗಿತ್ತು.
ಉತ್ತರ ಪ್ರದೇಶದ ಏಳು ಹಂತದ ಮತದಾನ ಮುಕ್ತಾಯವಾಗುವ ಮೂಲಕ ಸುಮಾರು ಎರಡು ತಿಂಗಳ ಹೈವೋಲ್ಟೇಜ್ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಉತ್ತರ ಪ್ರದೇಶ, ಮಣಿಪುರ್, ಉತ್ತರಾಖಂಡ್, ಗೋವಾ ಹಾಗೂ ಪಂಜಾಬ್ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಮಾರ್ಚ್ 11ರಂದು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
SCROLL FOR NEXT