ದಲಜೀತ್ ಜೌಧರಿ - ಸೈಫುಲ್ಲಾ 
ದೇಶ

ಹತ್ಯೆಯಾದ ಸೈಫುಲ್ಲಾ ಸ್ವಯಂ ಘೋಷಿತ ಉಗ್ರ, ಐಎಸ್ಐಎಸ್ ನಂಟಿನ ಬಗ್ಗೆ ಸಾಕ್ಷ್ಯ ಇಲ್ಲ: ಪೊಲೀಸ್

ಲಖನೌನಲ್ಲಿ ಭಯೋತ್ಪಾದಕ ನಿಗ್ರಹ ಪಡೆ(ಎಟಿಎಸ್) ಗುಂಡೇಟಿಗೆ ಬಲಿಯಾದ ಶಂಕಿತ ಉಗ್ರ ಸೈಫುಲ್ಲಾ ಐಎಸ್ಐಎಸ್ ನೊಂದಿಗೆ ಸಂಪರ್ಕ....

ಲಖನೌ: ಲಖನೌನಲ್ಲಿ ಭಯೋತ್ಪಾದಕ ನಿಗ್ರಹ ಪಡೆ(ಎಟಿಎಸ್) ಗುಂಡೇಟಿಗೆ ಬಲಿಯಾದ ಶಂಕಿತ ಉಗ್ರ ಸೈಫುಲ್ಲಾ ಐಎಸ್ಐಎಸ್ ನೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೆ ಆತ ಸ್ವಯಂ ಘೋಷಿಸಿ ಉಗ್ರನಾಗಿರುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಕಾನೂನು ಸುವ್ಯವಸ್ಥೆ) ದಲಜೀತ್ ಜೌಧರಿ ಅವರು, ಸೈಫುಲ್ಲಾ ಐಎಸ್ಐಎಸ್ ನೊಂದಿಗೆ ನಂಟು ಹೊಂದಿರುವ ಬಗ್ಗೆ ನಮಗೆ ಇದುವರೆಗೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ ಆತನ ಮನೆಯಲ್ಲಿ ಉರ್ದು ಹಾಗೂ ಇಂಗ್ಲಿಷ್ ನಲ್ಲಿದ್ದ ಐಎಸ್ಐಎಸ್ ಕುರಿತ ಪುಸ್ತಕಗಳು ಸಿಕ್ಕಿವೆ ಎಂದು ಹೇಳಿದ್ದಾರೆ.
ಶಂಕಿತ ಉಗ್ರನ ಮನೆಯಿಂದ ಎಂಟು ಪಿಸ್ತೂಲ್, 650 ಮದ್ದು ಗುಂಡುಗಳು, 50 ಸ್ಫೋಟಕ ವಸ್ತುಗಳು ಹಾಗೂ ಬಾಂಬ್ ತಯಾರಿಸುವ ಸಾಧನಗಳು, ಲ್ಯಾಪ್ ಟಾಪ್, ಆಧಾರ್ ಕಾರ್ಡ್, ವಿದೇಶಿ ಕರೆನ್ಸಿ, ಪಾಸ್ ಪೋರ್ಟ್ ಹಾಗೂ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.
ಲಖನೌನ ಹೊರವಲಯದ ಠಾಕೂರ್ ಗಂಜ್ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಸೈಫುಲ್ಲಾನನ್ನು ನಿನ್ನೆ ಭಯೋತ್ಪಾದನಾ ನಿಗ್ರಹ ದಳ ಎನ್ ಕೌಂಟರ್ ಮಾಡಿತ್ತು. ಉಜ್ಜನಿ ರೈಲು ಸ್ಫೋಟ ಪ್ರಕರಣದ 9 ಮಂದಿ ಶಂಕಿತ ಉಗ್ರರ ಪೈಕಿ ಸೈಫುಲ್ಲಾ ಸಹ ಒಬ್ಬನಾಗಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ನಿಂದ ಇರಾನ್ ಗುಪ್ತಚರ ಇಲಾಖೆ ಮುಖ್ಯಸ್ಥರ ಹತ್ಯೆ?; ಇದರಿಂದೆಲ್ಲಾ ನಾಯಕತ್ವಕ್ಕೆ ಮಾರಕ ಹೊಡೆತ ಬೀಳಲ್ಲ- ಇರಾನ್

ಉಪ ಚುನಾವಣೆ 2026: ಸಿದ್ದರಾಮಯ್ಯ ಸಂಧಾನ ಯಶಸ್ವಿ, ಬಾಗಲಕೋಟೆ ಕಾಂಗ್ರೆಸ್ ಕದನಕ್ಕೆ ಕೊನೆಗೂ ತೆರೆ!

'ನನ್ನ ಘನತೆಗೆ ಧಕ್ಕೆ, ಪ್ರಚಾರಕ್ಕೆ ಬರಲ್ಲ..' 'ನಿರ್ದೇಶಕ ಪ್ರೇಮ್ ಗೆ ಮೊದಲೇ ಎಚ್ಚರಿಕೆ ನೀಡಿದ್ದೆ..': ಬಾಲಿವುಡ್ ನಟಿ Nora Fatehi ಶಾಕಿಂಗ್ ಹೇಳಿಕೆ

'Rafale ಫೈಟರ್ ಜೆಟ್, ಕ್ಷಿಪಣಿಗಳೂ ಕೂಡ ನಿಷ್ಪ್ರಯೋಜಕ... ': ಲೆಫ್ಟಿನೆಂಟ್ ಜನರಲ್ Raj Shukla ಅಚ್ಚರಿ ಹೇಳಿಕೆ

ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಶಾಕ್; ಇನ್ನುಮುಂದೆ ಉತ್ತಮ ಕ್ರೆಡಿಟ್ ಸ್ಕೋರ್ ಕಡ್ಡಾಯ!

SCROLL FOR NEXT