ದೇಶ

ಉ.ಪ್ರ ಚುನಾವಣೆಯಲ್ಲಿ ವೋಟಿಂಗ್ ಮಷಿನ್ ಅಕ್ರಮದಿಂದ ಬಿಜೆಪಿಗೆ ಗೆಲುವು: ಮಾಯಾವತಿ

Srinivas Rao BV
ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಇವಿಎಂ ಮಷಿನ್ ದೋಷವೇ ಕಾರಣ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಆರೋಪಿಸಿದ್ದಾರೆ. 
ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮಾಯಾವತಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೋಟಿಂಗ್ ಮಷಿನ್ ಅಕ್ರಮ ನಡೆದಿದೆ. ಬಿಜೆಪಿ ಗೆಲ್ಲಲು ಚುನಾವಣಾ ಆಯೋಗವೇ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. 
ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಎಸ್ ಪಿಗಿಂತ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ.  ವೋಟಿಂಗ್ ಮಷಿನ್ ಟ್ಯಾಂಪರ್ ಮಾಡಿ ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಬಿಜೆಪಿಗೇ ಹೋಗುವಂತೆ ಮಾಡುವ ಮೂಲಕ ನಮಗೆ ಮೋಸ ಮಾಡಲಾಗಿದೆ ಎಂದು ಮಾಯಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಶೇ.22 ರಷ್ಟು ಮತಗಳಿದ್ದರೂ 19 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮುಸ್ಲಿಂ ಕ್ಷೇತ್ರದ ಹೆಚ್ಚು ಮತಗಳು ಬಿಜೆಪಿಗೆ ಹೋಗಿದ್ದು ಹೇಗೆ ಎಂದು ಪ್ರಶ್ನಿಸಿರುವ ಮಾಯಾವತಿ ವೋಟಿಂಗ್ ಮಿಷಿಂಗ್ ಅಕ್ರಮವಾಗಿದೆ ಎಂದು ಮಾಯಾವತಿ ಹೇಳಿದ್ದಾರೆ. 
SCROLL FOR NEXT