ಮೆಘಾಲಯ ಕಾಂಗ್ರೆಸ್ ಶಾಸಕನ ವಿರುದ್ಧ ಎಫ್ಐಆರ್ ದಾಖಲು
ಸರ್ಕಾರಿ ವೈದ್ಯರೊಬ್ಬರನ್ನು ಗನ್ ತೋರಿಸಿ ಒತ್ತೆಯಾಳಾಗಿರಿಸಿಕೊಂಡ ಆರೋಪದ ಮೇಲೆ ಮೆಘಾಲಯ ಆಡಳಿತರೂಢ ಕಾಂಗ್ರೆಸ್....
ಶಿಲಾಂಗ್: ಸರ್ಕಾರಿ ವೈದ್ಯರೊಬ್ಬರನ್ನು ಗನ್ ತೋರಿಸಿ ಒತ್ತೆಯಾಳಾಗಿರಿಸಿಕೊಂಡ ಆರೋಪದ ಮೇಲೆ ಮೆಘಾಲಯ ಆಡಳಿತರೂಢ ಕಾಂಗ್ರೆಸ್ ಶಾಸಕರೊಬ್ಬರ ವಿರುದ್ಧ ಶನಿವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ವೈದ್ಯ ಡಾ. ಎಸ್.ಎಂ. ಬುಜಬರುವಾ ಅವರು ನೀಡಿದ ದೂರಿನ ಆಧಾರದ ಮೇಲೆ ಕಾಂಗ್ರೆಸ್ ಶಾಸಕ ಸೆಂಗ್ನಮ್ ಎನ್ ಮರಕ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಸಂಬಂಧ ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ.
ಮಾರ್ಚ್ 5ರಂದು ಈಸ್ಟ್ ಗರೊ ಹಿಲ್ಸ್ ಜಿಲ್ಲೆಯ ರೊಂಜೆಂಗ್ ಪಿಡಬ್ಲ್ಯುಡಿ ಅಥಿತಿ ಗೃಹಕ್ಕೆ ಆಗಮಿಸಿದ್ದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಮರಕ್ ಹಾಗೂ ಅವರ ಸ್ನೇಹಿತರು ತಮ್ಮನ್ನು ಬೆಳಗಿನ ಜಾವ 3.30ರವೆರೆಗೆ ಗನ್ ತೋರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದರು ಎಂದು ಸರ್ಕಾರ ವೈದ್ಯ ಆರೋಪಿಸಿದ್ದಾರೆ.