ಸಂಗ್ರಹ ಚಿತ್ರ 
ದೇಶ

ಉತ್ತರ ಪ್ರದೇಶದ ಮುಂದಿನ ಸಿಎಂ ಯಾರು?

ಸತತ 15 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಏರುತ್ತಿದ್ದು, ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಪರಿಣಾಮಕಾರಿಯಾಗಿ ಬಳಸಿಕೊಂಡು ಅಭೂತಪೂರ್ವ ಯಶಸ್ಸು ಸಾಧಿಸಿದೆ.

ಲಖನೌ: ಸತತ 15 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಏರುತ್ತಿದ್ದು, ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಪರಿಣಾಮಕಾರಿಯಾಗಿ ಬಳಸಿಕೊಂಡು ಅಭೂತಪೂರ್ವ ಯಶಸ್ಸು ಸಾಧಿಸಿದೆ.

ಒಟ್ಟು 404 ಕ್ಷೇತ್ರಗಳ ಪೈಕಿ ಬಿಜೆಪಿ ಬರೊಬ್ಬರಿ 305 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಸ್‏ಪಿ-ಕಾಂಗ್ರೆಸ್ ಮೈತ್ರೀಕೂಟ 69 ಮತ್ತು ಬಿಎಸ್ ಪಿ19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಬಿಜೆಪಿ ಉತ್ತರ ಪ್ರದೇಶದಲ್ಲಿ  ಸರ್ಕಾರ ರಚನೆ ಮಾಡುವುದು ಸ್ಪಷ್ಟವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಗೂ ಉತ್ತರ ಪ್ರದೇಶ ಬಿಜೆಪಿ ನಾಯಕರ ಸಾಮೂಹಿಕ ನಾಯಕತ್ವಕ್ಕೆ ಜಯ ಸಂದಂತಾಗಿದೆ. ಇನ್ನು ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ  ಏರುತ್ತಿರುವ ಬಿಜೆಪಿಯಲ್ಲಿನ ಸಿಎಂ ಅಭ್ಯರ್ಥಿಗಳ ಕುರಿತು ಒಂದಷ್ಟು ವಿಶ್ಲೇಷಣೆ ಇಲ್ಲಿದೆ.

ಯೋಗಿ ಆದಿತ್ಯನಾಥ್
ಪೂರ್ವಾಂಚಲ ಭಾಗದ ಪ್ರಬಲ ಮುಖಂಡರಾಗಿ ಗುರುತಿಸಿಕೊಂಡಿರುವ ಯೋಗಿ ಆದಿತ್ಯಾನಾಥ್ ಸಿಎಂ ರೇಸ್ ನಲ್ಲಿದ್ದು, ಆರ್ ಎಸ್ ಎಸ್ ಮುಖಂಡರ ಬೆಂಬಲ ಇವರಿಗಿದೆ. ಆದರೆ ವಿವಾದಾತ್ಮಕ ಹೇಳಿಕೆಗಳು ಯೋಗಿ ಆದಿತ್ಯಾನಾಥ್  ಅವರ ಸಿಎಂ ಕನಸಿಗೆ ಭಂಗ ತರುವ ಸಾಧ್ಯತೆಯನ್ನೂ ಅಲ್ಲ ಗಳೆಯುವಂತಿಲ್ಲ.

ರಾಜ್ ನಾಥ್ ಸಿಂಗ್
ಉತ್ತರ ಪ್ರದೇಶ ಚುನಾವಣೆ ಘೋಷಣೆಯಾದ ದಿನದಿಂದಲೂ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಅವರ ಹೆಸರು ಸಿಎಂ ಹುದ್ದೆಗೆ ಕೇಳಿಬರುತ್ತಲೇ ಇದೆ. ಈ ಹಿಂದೆ ಒಮ್ಮೆ ಸಿಎಂ ಆಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ  ರಾಜ್ ನಾಥ್ ಸಿಂಗ್, ಈ ಹಿಂದೆ ತಾವು ಲಖನೌಗೆ ಮರಳು ಸಾಧ್ಯತೆ ಇಲ್ಲ ಎಂದು ಹೇಳುವ ಮೂಲಕ ತಾವು ಸಿಎಂ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಹೇಳಿದ್ದರು.

ಕೇಶವ ಮೌರ್ಯ
ಪೂರ್ವಾಂಚಲ ಭಾಗದ ಮುಖಂಡರಾಗಿರುವ ಕೇಶವ ಮೌರ್ಯ ಅವರ ಹೆಸರ ಕೂಡ ಉತ್ತರ ಪ್ರದೇಶ ಸಿಎಂ ಗಾದಿಗೆ ಪ್ರಬಲವಾಗಿ ಕೇಳಿಬರುತ್ತಿದ್ದು, ಹಿಂದುಳಿದ ವರ್ಗಗಳ ಮುಖಂಡ, ಕುರ್ಮಿ ಜನಾಂಗದ ನಾಯಕರಾಗಿ ಕೇಶವ್  ಮೌರ್ಯ ಗುರುತಿಸಿಕೊಂಡಿದ್ದಾರೆ. ಇದಲ್ಲದೆ ವಿಹೆಚ್ ಪಿ ಹಿನ್ನೆಲೆ ಹೊಂದಿರುವ ಕೇಶವ್ ಮೌರ್ಯ ಕೇಂದ್ರ ಸಚಿವರಾಗಿದ್ದಾರೆ ಮತ್ತು ಉತ್ತರ ಪ್ರದೇಶ ಬಿಜೆಪಿ ಘಟಕದ ಸಾರಥ್ಯವಹಿಸಿದ್ದಾರೆ. ಕೇಶವ್ ಪ್ರಸಾದ್ ಮೌರ್ಯ ಅವರು,  ಕುಶ್ವಾಹ್-ಮೌರ್ಯ ಸಮಾಜಕ್ಕೆ ಸೇರಿದವರಾಗಿದ್ದು, ಉತ್ತರ ಪ್ರದೇಶದ ಅತೀ ದೊಡ್ಡ ಹಿಂದುಳಿದ ಸಮಾಜದ ಮುಖಂಡರಾಗಿದ್ದಾರೆ.

ಉಮಾಭಾರತಿ
ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಖ್ಯಾತರಾಗಿರುವ ಕೇಂದ್ರ ಸಚಿವೆ ಉಮಾಭಾರತಿ ಅವರೂ ಕೂಡ ಉತ್ತರ ಪ್ರದೇಶ ಸಿಎಂ ಆಂಕಾಂಕ್ಷಿಗಳ ಹುದ್ದೆಯಲ್ಲಿದ್ದು, ಆರ್ ಎಸ್ ಎಸ್ ಮತ್ತು ಅಮಿತ್ ಶಾ ಅವರ ಬೆಂಬಲ ಇವರಿಗಿದೆ ಎಂದು  ಹೇಳಲಾಗುತ್ತಿದೆ.

ಡಾ.ಮಹೇಶ್ ಶರ್ಮಾ
ಆರ್ ಎಸ್ ಎಸ್ ಹಿನ್ನಲೆಯುಳ್ಳ ಡಾ.ಮಹೇಶ್ ಶರ್ಮಾ ಅವರ ಹೆಸರೂ ಕೂಡ ಸಿಎಂ ರೇಸ್ ನಲ್ಲಿ ಕೇಳಿಬರುತ್ತಿದ್ದು, ಮಹೇಶ್ ಶರ್ಮಾ ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಅಂತೆಯೇ ಹಾಲಿ ಕೇಂದ್ರ ಸಚಿವರಾಗಿದ್ದಾರೆ.

ಕಲ್ರಾಜ್ ಮಿಶ್ರಾ
ಕಲ್ ರಾಜ್ ಮಿಶ್ರಾ ಅವರ ಬಹು ಸಂಖ್ಯಾತ ಬ್ರಾಹ್ಮಣ ಸಮುದಾಯದವರಾಗಿದ್ದು, ಉತ್ತರ ಪ್ರದೇಶದಲ್ಲಿ ಉತ್ತಮ ರಾಜಕರಾಣಿ ಎಂಬ ಖ್ಯಾತಿ ಪಡೆದಿದ್ದಾರೆ. ವಿವಾದಗಳಿಂದ ದೂರವಿರುವ ಕಲ್ರಾಜ್ ಮಿಶ್ರಾ ಅವರು, ಬ್ರಾಹ್ಮಣ ಮುಖಂಡ, ಉತ್ತಮ ರಾಜಕಾರಣಿ. ಇವರಿಗೆ ರಾಷ್ಟ್ರ ರಾಜಕಾರಣದ ಅನುಭವವಿದೆ. ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಬ್ರಾಹ್ಮಣ ಮತ್ತು ಮೇಲ್ವರ್ಗದ ಜಾತಿಗಳ ಮತಗಳನ್ನು ಗಟ್ಟಿಗೊಳಿಸಿದರು.

ಇವರಷ್ಟೇ ಅಲ್ಲದೇ ಟೆಲಿಕಾಂ ಸಚಿವ ಮನೋಜ್ ಸಿಂಹಾ, ಬರೇಲಿ ಸಂಸದ ಸಂತೋಷ್ ಗಂಗ್ವಾರ್ ಅವರ ಹೆಸರೂ ಕೂಡ ಸಿಎಂ ಹುದ್ದೆ ರೇಸ್ ನಲ್ಲಿ ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)