ದೇಶ

2030 ಕ್ಕೆ 1.45 ಬಿಲಿಯನ್ ದಾಟಲಿರುವ ಚೀನಾ ಜನಸಂಖ್ಯೆ

Srinivas Rao BV
ಬೀಜಿಂಗ್: 2030 ಕ್ಕೆ ಚೀನಾ ಜನಸಂಖ್ಯೆ 1.45 ಬಿಲಿಯನ್ ದಾಟಲಿದ್ದು, 2050 ರ ವೇಳೆಗೆ 1.4 ಬಿಲಿಯನ್ ಗೆ ಇಳಿಕೆಯಾಗಲಿದೆ, ಈ ಶತಮಾನದ ಅಂತ್ಯಕ್ಕೆ 1.1 ಬಿಲಿಯನ್ ನಷ್ಟಾಗಲಿದೆ ಎಂದು ಚೀನಾ ಅಧಿಕಾರಿಗಳು ಹೇಳಿದ್ದಾರೆ. 
ಚೀನಾದ ರಾಷ್ಟ್ರೀಯ ಆರೋಗ್ಯ ಹಾಗೂ ಕುಟುಂಬ ನಿಯಂತ್ರಣ ಯೋಜನೆಯ ಉಪಮುಖ್ಯಸ್ಥರಾಗಿರುವ ವಾಂಗ್ ಪಿಯಾನ್, ಚೀನಾದ ಜನಸಂಖ್ಯೆಯ ಬಗ್ಗೆ ಮಾಹಿತಿ ನೀಡಿದ್ದು, ಚೀನಾದಲ್ಲಿ ಶತಮಾನ ಕಳೆದರೂ ಜನಸಂಖ್ಯೆ ಕುಸಿಯುವುದಿಲ್ಲ ಎಂದು ವಾಂಗ್ ಹೇಳಿದ್ದಾರೆ. 
ಚೀನಾದಲ್ಲಿ ಉದ್ಯೋಗಕ್ಕೆ ಹೋಗುವ 15-64 ವರ್ಷದವರೆಗಿನವರ ಜನಸಂಖ್ಯೆ ಒಂದು ಬಿಲಿಯನ್ ಗಿಂತಲೂ ಸ್ವಲ್ಪ ಹೆಚ್ಚಿದ್ದು, ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.73 ರಷ್ಟಿದೆ. 2020 ರ ವೇಳೆಗೆ ಕೆಲಸಕ್ಕೆ ಹೋಗುವವರ ಜನಸಂಖ್ಯೆ 985 ಮಿಲಿಯನ್ ಗೆ ಇಳಿಕೆಯಾಗಲಿದ್ದು, 2050 ಕ್ಕೆ 800 ಮಿಲಿಯನ್ ಗಳಿಕೆ ಇಳಿಕೆಯಾಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ಹಾಗೂ ಕುಟುಂಬ ನಿಯಂತ್ರಣ ಯೋಜನೆಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. 
SCROLL FOR NEXT