ದೇಶ

ಇಂದು ದೇಶಾದ್ಯಂತ ವಿಶ್ವ ಗ್ರಾಹಕ ಹಕ್ಕು ದಿನಾಚರಣೆ

Sumana Upadhyaya
ನವದೆಹಲಿ: ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ವರ್ಷದ ಘೋಷವಾಕ್ಯ ಡಿಜಿಟಲ್ ಯುಗದಲ್ಲಿ ಗ್ರಾಹಕರ ನಿರ್ಮಾಣ ಎಂಬುದಾಗಿದೆ.
ದೇಶಾದ್ಯಂತ ಈ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕ ಹಕ್ಕುಗಳ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ದೆಹಲಿಯಲ್ಲಿ ಇಂದು ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಗ್ರಾಹಕರ ಮೂಲಭೂತ ಹಕ್ಕುಗಳನ್ನು ಪ್ರಚುರಪಡಿಸಲು, ಗ್ರಾಹಕರ ಹಕ್ಕುಗಳನ್ನು ಗೌರವಿಸಿ ರಕ್ಷಿಸಲು ಈ ದಿನವನ್ನು  ಆಚರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮೋಸ ಮಾಡುವುದು ಮತ್ತು ಸಾಮಾಜಿಕ ಅಸಮಾನತೆಯನ್ನು ತಡೆಯಲು ಈ ದಿನ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತದೆ. 
1962ರಲ್ಲಿ ಅಮೆರಿಕಾ ಅಧ್ಯಕ್ಷ ಜಾನ್ ಎಫ್ ಕೆನಡಿ ಅಮೆರಿಕಾ ಕಾಂಗ್ರೆಸ್ ನಲ್ಲಿ ಔಪಚಾರಿಕವಾಗಿ ಗ್ರಾಹಕರ ಹಕ್ಕಿನ ದಿನವನ್ನು ಉದ್ದೇಶಿಸಿ ಮಾತನಾಡಿದ್ದರು. ಮೊದಲ ಗ್ರಾಹಕರ ಹಕ್ಕು ದಿನಾಚರಣೆ 1983ರಲ್ಲಿ  ಜಾರಿಗೆ ಬಂತು. ಅಲ್ಲಿಂದ ನಂತರ ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಾ ಬಂತು. ಭಾರತದಲ್ಲಿ ವಿಶ್ವ ಗ್ರಾಹಕ ಹಕ್ಕು ದಿನಾಚರಣೆ ಜೊತೆಗೆ ರಾಷ್ಟ್ರೀಯ ಗ್ರಾಹಕ ಹಕ್ಕು ದಿನಾಚರಣೆಯನ್ನು 24ನೇ ಡಿಸೆಂಬರ್ ನಲ್ಲಿ ಆಚರಿಸಲಾಗುತ್ತಿದೆ.
SCROLL FOR NEXT