ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಗಿಲ್ಗಿಟ್-ಬಲ್ಟಿಸ್ತಾನ್ ನ್ನು 5ನೇ ಪ್ರಾಂತ್ಯವನ್ನಾಗಿ ಘೋಷಿಸುವ ಪಾಕ್ ಯತ್ನಕ್ಕೆ ಭಾರತ ಖಂಡನೆ

ನವದೆಹಲಿ: ಗಿಲ್ಗಿಟ್-ಬಲ್ಟಿಸ್ತಾನ್ ಆಯಕಟ್ಟಿನ ಪ್ರದೇಶವನ್ನು ತನ್ನ 5ನೇ ಪ್ರಾಂತ್ಯವನ್ನಾಗಿ ಘೋಷಿಸಲು...

ವಿದೇಶಾಂಗ ಸಚಿವಾಲಯ ವಕ್ತಾರ ಗೋಪಾಲ್ ಬಗ್ಲೆ
Sumana Upadhyaya
Updated On : 16 Mar 2017, 7:02 am
ನವದೆಹಲಿ: ಗಿಲ್ಗಿಟ್-ಬಲ್ಟಿಸ್ತಾನ್ ಆಯಕಟ್ಟಿನ ಪ್ರದೇಶವನ್ನು ತನ್ನ 5ನೇ ಪ್ರಾಂತ್ಯವನ್ನಾಗಿ ಘೋಷಿಸಲು ಇಸ್ಲಾಮಾಬಾದ್ ಉಪಾಯ ನಡೆಸುತ್ತಿದ್ದು, ಜಮ್ಮು-ಕಾಶ್ಮೀರದ ಭಾಗಗಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಯತ್ನಿಸುತ್ತಿರುವ ಪಾಕಿಸ್ತಾನದ ಅಕ್ರಮವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದು ತಕ್ಷಣ ಆ ಪ್ರದೇಶವನ್ನು ತೆರವುಗೊಳಿಸಬೇಕೆಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಜಮ್ಮು-ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲೆ ಹೇಳಿದ್ದು, ಪಾಕಿಸ್ತಾನ ಕಡೆಯ ಏಕ ಪಕ್ಷೀಯ ಪ್ರಯತ್ನ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದೆ.
ಜಮ್ಮು-ಕಾಶ್ಮೀರದ ಭಾಗವನ್ನು ಅಕ್ರಮವಾಗಿ ಕಸಿದುಕೊಳ್ಳುವ ಪಾಕಿಸ್ತಾನದ ಪ್ರಯತ್ನವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದನ್ನು ತಕ್ಷಣವೇ ಪಾಕಿಸ್ತಾನ ಬಿಡಬೇಕು ಎಂದು ಹೇಳಿದರು. ಕಳೆದ 70 ವರ್ಷಗಳಿಂದ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿರುವ ಜನರ ಹಕ್ಕುಗಳ ಉಲ್ಲಂಘನೆ ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಬಾಗ್ಲೆಯ್ ಮಾಧ್ಯಮಗಳಿಗೆ ತಿಳಿಸಿದರು.

Advertisement

Advertisement

ಇದು ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು ಭಾರತ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಗಿಲ್ಗಿಟ್-ಬಲ್ಟಿಸ್ತಾನ್ ಪಾಕಿಸ್ತಾನದ ಉತ್ತರ ಆಡಳಿತಾತ್ಮಕ ಪ್ರದೇಶವಾಗಿದ್ದು ಅದು ವಿವಾದಾತ್ಮಕ ಪಾಕ್ ಆಕ್ರಮಿತ ಕಾಶ್ಮೀರದ ಗಡಿಯಲ್ಲಿದೆ. ಈ ಪ್ರದೇಶವನ್ನು ಪಾಕಿಸ್ತಾನ ತನ್ನ 5ನೇ ಪ್ರಾಂತ್ಯವನ್ನಾಗಿ ಘೋಷಿಸಲು ಯತ್ನಿಸುತ್ತಿದೆ.
ಪ್ರಧಾನ ಮಂತ್ರಿಗೆ ವಿದೇಶಾಂಗ ವ್ಯವಹಾರಗಳಲ್ಲಿ ಸಲಹೆ ನೀಡುವ ಸರ್ತಾಜ್ ಅಜೀಜ್ ನೇತೃತ್ವದ ಸಮಿತಿ ಈ ಪ್ರದೇಶಕ್ಕೆ ಪ್ರಾಂತೀಯ ಸ್ಥಾನವನ್ನು ನೀಡಲು ಶಿಫಾರಸ್ಸು ಮಾಡಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement