ದೇಶ

ಗೆಲವು ಸಾಧಿಸಿದ್ದು ಪ್ರಜಾಪ್ರಭುತ್ವ: ರವಿಶಾಸ್ತ್ರಿ ಶುಭಾಶಯಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ

Manjula VN
ನವದೆಹಲಿ: ಉತ್ತರಪ್ರದೇಶ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದಕ್ಕಾಗಿ ಶುಭಾಶಯ ಕೋರಿದ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿಯವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಮೆಂಟ್ರಿ ಸ್ಟೈಲಿನಲ್ಲಿಯೇ ಉತ್ತಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭರ್ಜಲಿ ಗೆಲವು ಸಾಧಿಸಿದ್ದ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ರವಿಶಾಸ್ತ್ರಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯವರಿಗೆ ಶುಭಾಶಯಗಳನ್ನು ಕೋರಿದ್ದರು. 
ಉತ್ತರಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕ ಅದ್ಭುತ ಗೆಲುವಿಗೆ ಶುಭಾಶಯಗಳು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜೋಡಿ ಬಂದೂಕಿನ ಗುಂಡಿನಂತೆ ವೇಗವಾಗಿ 300 ರ ರೇಖೆಯನ್ನು ದಾಟಿತು ಎಂದು ಹೇಳಿದ್ದರು.
 ಇದಕ್ಕೆ ಕಾಮೆಂಟ್ರಿ ಸ್ಟೈಲಿನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿಯವರು ಧನ್ಯವಾದಗಳು. 'UP polls did not quite go down to the wire' ಉತ್ತರಪ್ರದೇಶ ಚುನಾವಣೆಯಲ್ಲಿ ಅಂತಿಮವಾಗಿ ಗೆಲವು ಸಾಧಿಸಿದ್ದು ಪ್ರಜಾಪ್ರಭುತ್ವ ಎಂದು ಹೇಳಿದ್ದಾರೆ.
'go down to the wire' ಎಂಬುದು ಇಂಗ್ಲೀಷ್ ನುಡಿಗಟ್ಟಾಗಿದ್ದು, ಸಾಮಾನ್ಯವಾಗಿ ಈ ನುಡಿಗಟ್ಟನ್ನು ಕ್ರಿಕೆಟ್ ಪಂದ್ಯದ ಕೊನೆಯ ಓವರ್ ನಲ್ಲಿ ಬಳಸಲಾಗುತ್ತದೆ. ಒಂದು ತಂಡದ ಸೋಲು ಅಥವಾ ಗೆಲುವನ್ನು ವಿವರಿಸಲು ಕ್ರಿಕೆಟ್ ಕಾಮೆಂಟೇಟರ್ಸ್ ಈ ನುಡಿಗಟ್ಟನ್ನು ಬಳಸುತ್ತಾರೆ. 
SCROLL FOR NEXT