ಬಿಜೆಪಿ ಸಂಸದ ಮನೋಜ್ ತಿವಾರಿ 
ದೇಶ

ಹಾಡು ಹಾಡುವಂತೆ ಮನವಿ ಮಾಡಿದ ಶಿಕ್ಷಕಿಯನ್ನು ಸಾರ್ವಜನಿಕವಾಗಿ ನಿಂದಿಸಿದ ಬಿಜೆಪಿ ಸಂಸದ!

ಹಾಡು ಹಾಡುವಂತೆ ಮನವಿ ಮಾಡಿದ ಶಿಕ್ಷಕಿಯೊಬ್ಬರನ್ನು ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿರುವ ಘಟನೆಯೊಂದು ನಡೆದಿದೆ...

ನವದೆಹಲಿ: ಹಾಡು ಹಾಡುವಂತೆ ಮನವಿ ಮಾಡಿದ ಶಿಕ್ಷಕಿಯೊಬ್ಬರನ್ನು ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿರುವ ಘಟನೆಯೊಂದು ನಡೆದಿದೆ. 
ಮನೋಜ್ ತಿವಾರಿ ಶಿಕ್ಷಕಿಗೆ ಅವಮಾನಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಿವಾರಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ. 
ವಿಡಿಯೋದಲ್ಲಿರುವ ಪ್ರಕಾರ, ಕಾರ್ಯಕ್ರಮವೊಂದರ ನಿರೂಪಣೆ ಮಾಡುತ್ತಿದ್ದ ಶಿಕ್ಷಕಿಯೊಬ್ಬರು ಅತಿಥಿಯಾಗಿ ಬಂದಿದ್ದ ತಿವಾರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಂತರ ಎರಡು ಸಾಲು ಹಾಡು ಹಾಡುವಂತೆ ಮನವಿ ಮಾಡಿದ್ದಾರೆ. 
ಈ ವೇಳೆ ಶಿಕ್ಷಕಿ ಮೇಲೆ ಸಿಟ್ಟುಗೊಂಡ ತಿವಾರಿ, ನನಗೆ ಹಾಡು ಹಾಡುವಂತೆ ಹೇಳಲು ನಿಮಗೆ ಎಷ್ಟು ಧೈರ್ಯ? ಒಬ್ಬ ನಂಸದನೊಂದಿಗೆ ನಡೆದುಕೊಳ್ಳುವ ರೀತಿಯೇ ಇದು...? ಸಂಸದರಲ್ಲಿ ಹಾಡು ಹೇಳಲು ಹೇಳುತ್ತಿದ್ದೀರಲ್ಲಾ...ಇದು ಹಾಡು ಹಾಡುವ ವೇದಿಕೆಯೇ? ನಿಮಗೆ ಮರ್ಯಾದೆ ಇಲ್ಲವೇ? ನೀವು ಈ ರೀತಿ ಮಾತನಾಡುತ್ತಿದ್ದೀರಲ್ಲಾ...ನೀವು ಮಕ್ಕಳಿಗೆ ಏನನ್ನು ಕಲಿಸುತ್ತೀರಿ...? ಕೂಡಲೇ ವೇದಿಕೆಯಿಂದ ಕೆಳಗೆ ಇಳಿಯಿರಿ... ಎಂದು ನಿಂದಿಸಿದ್ದಾರೆ. 
ಅಲ್ಲದೆ, ಕಾರ್ಯಕ್ರಮದ ಮುಂದಿನ ಆಸನಗಳಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. 
ಇನ್ನು ವಿಡಿಯೋವನ್ನು ಎಲ್ಲಿ ಹಾಗೂ ಯಾರು ಮಾಡಿದ್ದೇರೆಂಬುದು ಈವರೆಗು ಸ್ಪಷ್ಟವಾಗಿಲ್ಲ. ಮನೋಜ್ ತಿವಾರಿಯವರು ಸಂಸದರಾದ ಬಳಿಕ ಸರ್ಕಾರಿ ಕಾರ್ಯಕ್ರಮವೇ ಆಗಿರಲಿ, ಯಾವುದೇ ಕಾರ್ಯಕ್ರಮವಾಗಿರಲಿ ಯಾವುದಕ್ಕೂ ಹಿಂದೂ ಮುಂದೂ ಆಲೋಚನೆ ಮಾಡದೆಯೇ ಹಾಡಲು ನಿಂತು ಬಿಡುತ್ತಿದ್ದರು. ಸಿಸಿಎಲ್ ಪಂದ್ಯ, ಕಾಮಿಡಿ ನೈಟ್ ವಿತ್ ಕಪಿಲ್ ಶೋನಲ್ಲಿಯೂ ತಿವಾರಿಯವರು ಹಾಡು ಹಾಡಿದ್ದರು. ಇದಲ್ಲದೆ, ದುಬಾರಿ ನೋಟುಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಸಂದರ್ಭದಲ್ಲಿಯೂ ಜನತೆ ಬ್ಯಾಂಕ್ ಮತ್ತು ಎಂಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿದ್ದ ವೇಳೆ ಜನರನ್ನು ಗೇಲಿ ಮಾಡಿ ಹಾಡೊಂದನ್ನು ಹಾಡಿದ್ದರು. 
ಆದರೆ, ಕಾರ್ಯಕ್ರಮವೊಂದರಲ್ಲಿ ಶಿಕ್ಷಕಿ ಹಾಡು ಹಾಡುವುದಕ್ಕೆ ಮನವಿ ಮಾಡಿರುವುದಕ್ಕೆ ತಿವಾರಿಯವರು ಈ ಬಾರಿ ಕೆಂಡಾಮಂಡಲವಾಗಿರುವುದು ಹಲವರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. 
ಇನ್ನು ವಿಡಿಯೋವಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಆಮ್ ಆದ್ಮಿ ಪಕ್ಷ ತೀವ್ರವಾಗಿ ಟೀಕೆಗಳನ್ನು ವ್ಯಕ್ತಪಡಿಸತೊಡಗಿದೆ. ಅಲ್ಲದೆ, ಮಹಿಳೆಯನ್ನು ನಿಂದಿಸಿದ ತಿವಾರಿ ವಿರುದ್ಧ ಮಹಿಳಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಕೈ ಮುಗೀತೀನಿ ಬಿಟ್ ಬಿಡ್ರೋ': ಫ್ರೀ ಗಿಫ್ಟ್ ಕೇಳಿದ್ದೇ ತಪ್ಪಾಯ್ತು, ಮನೆಗೆ ಬಂತು 70 ಕೋಟಿ ರೂ.ಮಿಲಿಟರಿ ಟ್ಯಾಂಕ್ ಆರ್ಡರ್; ನೆಟ್ಟಿಗರ ಕಾಟಕ್ಕೆ ವ್ಯಕ್ತಿ ಹೈರಾಣ!-Video

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?