ದೇಶ

ಅಟಾರ್ನಿ ಜನರಲ್ ರಾಜೀನಾಮೆಗೆ ಕೇರಳ ಕಾಂಗ್ರೆಸ್ ಒತ್ತಾಯ

Srinivas Rao BV
ತಿರುವನಂತಪುರಂ: ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ರಾಜೀನಾಮೆ ನೀಡಬೇಕೆಂದು ಕೇರಳ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. 
ಕೆಲವು ಬಾರ್ ಹೋಟೆಲ್ ಮಾಲಿಕರ ಪರವಾಗಿ, ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಅಟಾರ್ನಿ ಜನರಲ್ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿಎಂ ಸುಧೀರನ್ ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮದ್ಯವನ್ನೂ ಮಾರಾಟ ಮಾಡಬಾರದು ಎಂದು ಡಿಸೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ರೋಹಟ್ಗಿ ಮಾತ್ರ ಕೇರಳ ಸರ್ಕಾರಕ್ಕೆ ಮದ್ಯ ಮಾರಾಟ ಮಾಡುವ ಚಿಲ್ಲರೆ ಮಳಿಗೆಗಳನ್ನು ಮಾತ್ರ ತೆರವುಗೊಳಿಸಬೇಕು ಬಾರ್ ಹೋಟೆಲ್ ಗಳು ಹಾಗೂ ಬೀರ್-ವೈನ್ ಅಂಗಡಿಗಳು ಹೆದ್ದಾರಿಯಲ್ಲಿರಬಹುದೆಂದು ಹೇಳಿದ್ದರು. 
ಮುಕುಲ್ ರೋಹಟ್ಗಿಯವರ ಈ ಹೇಳಿಕೆಯೇ ಅವರು ಕೆಲವು ಬಾರ್ ಹೋಟೆಲ್ ಗಳ ಮಾಲಿಕರ ಪರವಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಹಿಂದಿನ ಕೇರಳ ಸರ್ಕಾರದ ಮದ್ಯ ನೀತಿಗೆ ವಿರುದ್ಧವಾಗಿ ಬಾರ್ ಹೋಟೆಲ್ ಮಾಲಿಕರ ಪರವಾಗಿ ಮುಕುಲ್ ರೋಹಟ್ಗಿ ಕೆಲಸ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕೆಂದು ವಿಎಂ ಸುಧೀರನ್ ಆಗ್ರಹಿಸಿದ್ದಾರೆ. 
SCROLL FOR NEXT