ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ) 
ದೇಶ

ಜೀವಂತವಾಗಿ ಭಾರತಕ್ಕೆ ಹೋಗಲು ಸಾಧ್ಯವಿಲ್ಲ ಎಂದ ಪಾಕಿಸ್ತಾನಿ ಗಂಡ: ಮಹಿಳೆ ನೆರವಿಗೆ ಧಾವಿಸಿದ ಸುಷ್ಮಾ ಸ್ವರಾಜ್!

ಪಾಕಿಸ್ತಾನ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಆತನ ತಮ್ಮಂದಿರಿಂದ ಕಿರುಕುಳು ಅನುಭವಿಸುತ್ತಿದ್ದ ಭಾರತೀಯ ಮೂಲದ ಮಹಿಳೆ ನೆರವಿಗೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಧಾವಿಸಿದ್ದು, ಶೀಘ್ರದಲ್ಲೇ ಭಾರತಕ್ಕೆ ಕರೆತರುವುದಾಗಿ ಮಹಿಳೆಯ ತಂದೆಗೆ ಭರವಸೆ ನೀಡಿದ್ದಾರೆ.

ನವದೆಹಲಿ: ಪಾಕಿಸ್ತಾನ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಆತನ ತಮ್ಮಂದಿರಿಂದ ಕಿರುಕುಳು ಅನುಭವಿಸುತ್ತಿದ್ದ ಭಾರತೀಯ ಮೂಲದ ಮಹಿಳೆ ನೆರವಿಗೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಧಾವಿಸಿದ್ದು, ಶೀಘ್ರದಲ್ಲೇ ಭಾರತಕ್ಕೆ  ಕರೆತರುವುದಾಗಿ ಮಹಿಳೆಯ ತಂದೆಗೆ ಭರವಸೆ ನೀಡಿದ್ದಾರೆ.

ತನ್ನ ಪತ್ನಿ ಜೀವಂತವಾಗಿ ಭಾರತಕ್ಕೆ ಹೋಗಲು ತಾನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಪಾಕಿಸ್ತಾನ ಮೂಲದ ಪತಿಗೆ ಸೆಡ್ಡು ಹೊಡೆದಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂತ್ರಸ್ತ ಮಹಿಳೆಯನ್ನು ಶೀಘ್ರದಲ್ಲೇ  ಭಾರತಕ್ಕೆ ಸುರಕ್ಷಿತವಾಗಿ ಕರೆತರುವುದಾಗಿ ಭರವಸೆ ನೀಡಿದ್ದಾರೆ. ಮೂಲಗಳ ಪ್ರಕಾರ ಹೈದರಾಬಾದ್ ಮೂಲದ ಮಹಿಳೆ ಮಹಮದೀಯ ಬೇಗಂ ಅವರಿಗೆ ಪತಿ ಯೂನಿಸ್ ಹಾಗೂ ಅತಮ ತಮ್ಮಂದಿರ ನಿತ್ಯ ಕಿರುಕುಳ  ನೀಡುತ್ತಿದ್ದರಂತೆ. ಈ ಬಗ್ಗೆ ಹಲವು ಬಾರಿ ಮಹಮದೀಯ ಬೇಗಂ ತನ್ನ ತಾಯಿ ಹಜಾರಾ ಬೇಗಂ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಮಹಮದೀಯ ಬೇಗಂ ಅವರ ತಂದೆ ಮಹಮದ್ ಅಕ್ಬರ್ ಅವರಿಗೆ ಈ ವಿಚಾರ ತಿಳಿದರೂ ಮಗಳಿಗೆ ಯಾವುದೇ ರೀತಿಯ ನೆರವು ನೀಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು. ಈ ವೇಳೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ  ಯೂಟ್ಯೂಬ್ ಮೂಲಕ ವಿಡಿಯೋ ಸಂದೇಶ ರವಾನಿಸಿ ಸಹಯಕ್ಕಾಗಿ ಮೊರೆ ಇಟ್ಟಿದ್ದರು. ಅಕ್ಬರ್ ಅವರ ವಿಡಿಯೋ ನೋಡಿ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ ಅವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ  ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಿ ಸಂತ್ರಸ್ತ ಮಹಿಳೆ ಮಹಮದೀಯ ಬೇಗಂ ಅವರ ಸ್ಥಿತಿಗತಿ ತಿಳಿಯುವಂತೆ ಸೂಚನೆ ನೀಡಿದ್ದಾರೆ. ಇದೀಗ ಅಧಿಕಾರಿಗಳು ಮಹಮದೀಯ ಬೇಗಂ  ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ತಾನು ಮತ್ತೆ ಭಾರತಕ್ಕೆ ವಾಪಸಾಗಲು ಇಚ್ಛಿಸುವುದಾಗಿ ಮಹಮದೀಯ ಬೇಗಂ ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆಯ ಆಸೆಯಂತೆ ಆಕೆಯನ್ನು ಭಾರತಕ್ಕೆ ಕರೆತರುವ ಕಾರ್ಯಕ್ಕೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ಚಾಲನೆ ನೀಡಿದ್ದು, ಅವಧಿ ಮೀರಿರುವ ಅವರ ಭಾರತದ ಪಾಸ್ ಪೋರ್ಟ್ ಅನ್ನು ನವೀಕರಿಸಿ ಅವರು  ಭಾರತಕ್ಕೆ ಸುರಕ್ಷಿತವಾಗಿ ವಾಪಾಸ್ ಆಗಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇನ್ನು ಮಹಮದೀಯ ಬೇಗಂ ಮತ್ತು ಯೂನಿಸ್ ದಂಪತಿಗೆ 5 ಮಕ್ಕಳಿದ್ದು, ಈ ಪೈಕಿ 2 ಹೆಣ್ಣು ಹಾಗೂ ಮೂರು ಗಂಡು ಮಕ್ಕಳಿದ್ದಾರೆ. ಯೂನಿಸ್ ಮತ್ತು ಅವರ ತಮ್ಮಂದಿರು ಮಹಮದೀಯ ಬೇಗಂ ಅವರನ್ನು ಕಟ್ಟಿಹಾಕಿ  ಥಳಿಸುತ್ತಿದ್ದರಂತೆ. ಅಲ್ಲದೆ ಪತಿ ಯೂನಿಸ್ ನೀನು ಜೀವಂತವಾಗಿ ಭಾರತಕ್ಕೆ ಹೋಗಲು ನಾನು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಮಹಮದೀಯ ಬೇಗಂ ತನ್ನ ತಾಯಿ ಬಳಿ ಹೇಳಿಕೊಂಡಿದ್ದಾರೆ. ಇದೀಗ  ಭಾರತೀಯ ಮೂಲದ ಮಹಿಳೆಗೆ ಸುಷ್ಮಾ ಸ್ವರಾಜ್ ಮೂಲಕ ಹೊಸ ಭರವಸೆಯ ಬೆಳಕು ಕಾಣುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಚುನಾವಣೆ ಘೋಷಣೆಯಾದ್ರೆ 25 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ ಹೊಸ ಬಾಂಬ್‌

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕ್‌ ಮೂಲದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ, ಸಾವು; ಚಾಲಕನಿಗೆ ಜೈಲು ಶಿಕ್ಷೆ ವಿನಾಯಿತಿ!