ನವದೆಹಲಿ: ಯುವಕನೊಬ್ಬ ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ 18 ವರ್ಷದ ಯುವತಿ ಮೇಲೆ ಆಸಿಡ್ ಎರಚಿದ ಘಟನೆ ಬುಧವಾರ ದಕ್ಷಿಣ ದೆಹಲಿಯ ಸಂಗಮ್ ವಿಹಾರ ಪ್ರದೇಶದಲ್ಲಿ ನಡೆದಿದೆ.
ಆಸಿಡ್ ದಾಳಿಯಿಂದಾಗಿ ಯುವತಿಗೆ ಸುಟ್ಟಗಾಯಗಳಾಗಿದ್ದು, ಆಕೆಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಮ್ಎಸ್)ಗೆ ದಾಖಲಿಸಲಾಗಿದೆ.
ಈ ಸಂಬಂಧ ಭಗ್ನ ಪ್ರೇಮಿ 23 ವರ್ಷದ ರವಿ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಯುವತಿ ಇಂದು ಬೆಳಗ್ಗೆ ಸಂಗಮ್ ವಿಹಾರದಲ್ಲಿರುವ ತನ್ನ ಮನೆಯ ಹೊರಗಡೆ ನಿಂತಿದ್ದಾಗ ರವಿ ಕುಮಾರ್ ಆಸಿಡ್ ದಾಳಿ ನಡೆಸಿದ್ದು, ಇಬ್ಬರು ಒಂದೇ ಪ್ರದೇಶದ ನಿವಾಸಿಗಳಾಗಿದ್ದಾರೆ.