ಇಸ್ಲಾಮಾಬಾದ್: ಸಿಂಧೂ ನದಿ ನೀರು ವಿವಾದ ಸಂಬಂಧ ಮಿಯಾರ್ ಅಣೆಕಟ್ಟುವಿನಲ್ಲಿ ಇಸ್ಲಾಮಾಬಾದ್'ಗೆ ಮೀಸಲಾತಿ ನೀಡಬೇಕೆಂಬ ಆಗ್ರಹವನ್ನು ಭಾರತ ಒಪ್ಪಿಕೊಂಡಿದೆ ಎಂಬ ಪಾಕಿಸ್ತಾನ ಮಾಧ್ಯಮಗಳ ವರದಿಯನ್ನು ಭಾರತ ಬುಧವಾರ ತಿರಸ್ಕರಿಸಿದೆ.
ಪಾಕಿಸ್ತಾನ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು, ವರದಿಯಗಳು ತಪ್ಪಾಗಿದ್ದು, ನಾನು ಅಂತಹ ಯಾವುದೇ ಆಗ್ರಹಗಳನ್ನು ಒಪ್ಪಿಕೊಂಡಿಲ್ಲ ಎಂದು ಭಾರತೀಯ ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಸಿಂಧೂ ನದಿ ನೀರು ವಿವಾದ ಸಂಬಂಧ ವರದಿ ಮಾಡಿದ್ದ ಪಾಕಿಸ್ತಾನ ಮಾಧ್ಯಮಗಳು, ಸಿಂಧೂ ನಂದಿ ನೀರು ವಿವಾದ ಸಂಬಂಧ ಸಿಂಧು ನದಿ ಆಯೋಗ ಮಾತುಕತೆ ಆರಂಭಿಸಿದ್ದು, ಎರಡನೇ ದಿನದ ಮಾತುಕತೆ ವೇಳೆ ಮಿಯಾರ್ ಅಣೆಕಟ್ಟುವಿನಲ್ಲಿ ಇಸ್ಲಾಮಾಬಾದ್'ಗೆ ಮೀಸಲಾತಿ ನೀಡಲು ಭಾರತದ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆಂದು ಹೇಳಿಕೊಂಡಿದ್ದವು.
ಜಲವಿದ್ಯುತ್ ಯೋಜನೆಗೆ ಪಿ.ಕೆ. ಸಕ್ಸೇನಾ ಅವರು ಒಪ್ಪಿಗೆ ಸೂಚಿಸಿದ್ದಾರೆ. ಮಿಯಾರ್ ಯೋಜನೆಯ ವಿನ್ಯಾಸವನ್ನು ಪಾಕಿಸ್ತಾನದ ಜೊತೆಗೆ ಭಾರತ ಶೀಘ್ರದಲ್ಲಿಯೇ ಹಂಚಿಕೊಳ್ಳಲಿದೆ ಎಂದು ಮಿರ್ಜಾ ಆಸಿಫ್ ಬೇಗ್ ಅವರು ಹೇಳಿದ್ದಾರೆಂದು ಪಾಕ್ ಮಾಧ್ಯಮಗಳು ತನ್ನ ವರದಿಯಲ್ಲಿ ತಿಳಿಸಿದ್ದವು.
ಸಿಂಧೂ ನೀರು ಹಂಚಿಕೆ ಆಯೋಗದ ಆಯುಕ್ತ ಪಿ.ಕೆ. ಸಕ್ಸೇನಾ ನೇತೃತ್ವದಲ್ಲಿ 10 ಜನ ಸದಸ್ಯರ ತಂಡ ಪಾಕಿಸ್ತಾನದ ಮಿರ್ಜಾ ಆಸಿಫ್ ಬೇಗ್ ನೇತೃತ್ವದ ತಂಡದೊಂದಿಗೆ ಮಾರ್ಚ್20 ರಿಂದ ಸಭೆ ಆರಂಭವಾಗಿತ್ತು.
ಈ ವರೆಗೂ ಉಭಯ ದೇಶಗಳ ನಡುವೆ 112 ಬಾರಿ ಸಭೆ ನಡೆದಿದೆ. 2016ರಲ್ಲಿ ಸೆಪ್ಟಂಬರ್ ನಲ್ಲಿ ಸಭೆ ನಡೆಸಲು ಉಭಯ ರಾಷ್ಟ್ರಗಳು ತೀರ್ಮಾನ ಕೈಗೊಂಡಿತ್ತು. ಆದರೆ, ಉರಿ ಸೇನಾ ಮೇಲೆ ನಡೆದ ಉಗ್ರರು ದಾಳಿ ನಡೆಸಿದ ಹಿನ್ನಲೆಯಲ್ಲಿ ಸಭೆಯನ್ನು ನಡೆಸಲಾಗಿತ್ತು. 2015ರ ಬಳಿಕ ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ನಡುವೆ ಸಭೆ ನಡೆಯುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಸಭೆ 113ನೇ ಸಭೆಯಾಗಿದೆ.
ಚೆನಾಬ್ ನದಿಗೆ ಒಂದು ಸಾವಿರ ಮೆ.ವಾ ಸಾಮರ್ಥ್ಯದ ಪಕುಲ್ ದುಲ್ ಸ್ಥಾವರ, ಚೆನಾಬ್ ನ ಉಪನದಿಗಳಾಗಿರುವ ಮಿಯಾರ್ ನಲ್ಲಾ ನದಿಗೆ 120 ಮೆ.ವಾ ಸಾಮರ್ಥ್ಯ ಹಾಗೂ ಕಲ್ನಾಯ್ ನದಿಗೆ 43 ಮೆ.ವಾ ಸಾಮರ್ಥ್ಯದ ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಭಾರತ ಯೋಜನೆ ಸಿದ್ಧಪಡಿಸಿದೆ. ಆದರೆ, ಈ ಜಲವಿದ್ಯುತ್ ಸ್ಥಾವರಗಳ ನಿರ್ಮಾಣ 1960ರ ಸಿಂಧೂನದಿ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಪಾಕಿಸ್ತಾನ ವಾದಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos