ದೇಶ

ಕಪಿಲ್ ಶರ್ಮಾ ವಿರುದ್ಧ ಎಫ್ ಐಆರ್ ಗೆ ತಡೆಯಾಜ್ಞೆ ನೀಡಿದ ಮುಂಬೈ ಹೈಕೋರ್ಟ್

Sumana Upadhyaya
ಮುಂಬೈ: ಗುರುಗಾಂವ್ ಉಪ ನಗರದಲ್ಲಿ ಅಕ್ರಮವಾಗಿ ಫ್ಲ್ಯಾಟ್ ಹೊಂದಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸ್ಯನಟ ಕಪಿಲ್ ಶರ್ಮಾ ಅವರ ವಿರುದ್ಧ ದಾಖಲಿಸಿರುವ ಎಫ್ ಐಆರ್ ನ್ನು ತಡೆಹಿಡಿಯುವಂತೆ ಮುಂಬೈ ಹೈಕೋರ್ಟ್ ಆದೇಶಿಸಿದೆ.
ಕಪಿಲ್ ಶರ್ಮಾ ಅವರಿಗೆ ವೈಯಕ್ತಿಕ ವಿಚಾರಣೆ ನಡೆಸಲು ಅವಕಾಶ ನೀಡಿ ವಿವಾದವನ್ನು ಬಗೆಹರಿಸುವಂತೆ ಬೃಹತ್ ಮುಂಬೈ ಮಹಾನಗರ ಪಾಲಿಕೆಗೆ ಹೈಕೋರ್ಟ್ ಸೂಚಿಸಿದೆ.
ಶರ್ಮ ಅವರ ವಿರುದ್ಧದ ಎಲ್ಲಾ ಕೇಸುಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಪಾಲಿಕೆ ನ್ಯಾಯಾಲಯಕ್ಕೆ ತಿಳಿಸಿದೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಮ್ಮಲ್ಲಿ 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಕಪಿಲ್ ಶರ್ಮಾ ಟ್ವೀಟ್ ಮಾಡುವ ಮೂಲಕ ವಿವಾದವುಂಟಾಗಿತ್ತು. 
ಕಪಿಲ್ ಶರ್ಮಾ ಅವರು ತಮ್ಮ ವರ್ಸೊವಾ ಕಚೇರಿ ಕಟ್ಟಡ ಮಾತ್ರವಲ್ಲದೆ ಗುರುಂಗಾವ್ ನಲ್ಲಿರುವ ಅಪಾರ್ಟ್ ಮೆಂಟ್ ನ್ನು ಕೂಡ ನಿಯಮ ಮೀರಿ ಅಕ್ರಮವಾಗಿ ಕಟ್ಟಿಸಿಕೊಂಡಿದ್ದಾರೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಆರೋಪಿಸಿತ್ತು.
SCROLL FOR NEXT