ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ತಮಿಳುನಾಡು ಸ್ಪೀಕರ್ ವಿರುದ್ಧ ಡಿಎಂಕೆ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲು!

ತಮಿಳುನಾಡು ಸ್ಪೀಕರ್ ಪಿ ಧನಪಾಲ್ ಅವರ ವಿರುದ್ಧ ಡಿಎಂಕೆ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು, ಸ್ಪೀಕರ್ ಪರವಾಗಿ 122 ಮತಗಳು ಚಲಾವಣೆಯಾಗಿದ್ದು, ವಿರುದ್ಧವಾಗಿ 97 ಮತಗಳು ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 23 Mar 2017, 1:55 am

ಚೆನ್ನೈ: ತಮಿಳುನಾಡು ಸ್ಪೀಕರ್ ಪಿ ಧನಪಾಲ್ ಅವರ ವಿರುದ್ಧ ಡಿಎಂಕೆ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು, ಸ್ಪೀಕರ್ ಪರವಾಗಿ 122 ಮತಗಳು ಚಲಾವಣೆಯಾಗಿದ್ದು, ವಿರುದ್ಧವಾಗಿ 97 ಮತಗಳು ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.

ತಮಿಳುನಾಡು ಸಿಎಂ ಪಳನಿ ಸ್ವಾಮಿ ಅವರ ವಿಶ್ವಾಸ ಮತ ಯಾಚನೆ ವೇಳೆ ವಿಧಾನಸಭೆಯಲ್ಲಿ ನಡೆದಿದ್ದ ವ್ಯಾಪಕ ಗಲಭೆಯ ನಡುವೆಯೂ ಪಳನಿ ಸ್ವಾಮಿ ವಿಶ್ವಾಸ ಮತ ಗೆದಿದ್ದರು. ಈ ವೇಳೆ ಡಿಎಂಕೆ ಪಕ್ಷ ಶಾಸಕ ವರ್ತನೆಯಿಂದ  ಬೇಸತ್ತಿದ್ದ ಸ್ಪೀಕರ್ ಪಿ ಧನಪಾಲ್ ಅವರು ಶಾಸಕರನ್ನು ಮಾರ್ಷಲ್ ಗಳ ಸಹಾಯದಿಂದ ಡಿಎಂಕೆ ಶಾಸಕರನ್ನು ಹೊರಹಾಕಿದ್ದರು. ಈ ಘಟನೆ ಬಳಿಕ ಎಂಕೆ ಸ್ಚಾಲಿನ್ ನೇತೃತ್ವದಲ್ಲಿ ಡಿಎಂಕೆ ಪಕ್ಷ ಸ್ಪೀಕರ್ ಧನಪಾಲ್ ಅವರ ವಿರುದ್ಧ  ಅವಿಶ್ವಾಸ ನಿರ್ಣಯ ಮಂಡಿಸಿತ್ತು.

ಈ ಸಂಬಂಧ ಇಂದು ನಡೆದ ಮತದಾನದ ವೇಳೆ ಡಿಎಂಕೆಗೆ ಸೋಲಾಗಿದ್ದು, ಸ್ಪೀಕರ್ ಪರವಾಗಿ 122 ಮತಗಳು ಬಿದ್ದಿದ್ದು, ವಿರುದ್ಧವಾಗಿ ಕೇವಲ 97 ಮತಗಳು ಲಭಿಸಿವೆ. ಡಿಎಂಕೆ ಒತ್ತಾಯದ ಮೇರೆಗೆ ಶಾಸಕರನ್ನು ವಿಭಜಿಸಿ  ಮತದಾನಕ್ಕೆ ಅನುವು ಮಾಡಿಕೊಡಲಾಗಿತ್ತು. ಧ್ವನಿ ಮತದ ಮೂಲಕ ಮತದಾನ ಪ್ರಕ್ರಿಯೆ ನಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments