ಸೈಕಲ್ ಯಾತ್ರೆಗೆ ಸಿದ್ಧತೆ 
ದೇಶ

ಭಾರತ-ಬಾಂಗ್ಲಾದೇಶ ಜಂಟಿ ಸೇನಾ ಸೈಕಲ್ ಯಾತ್ರೆಗೆ ಅಗರ್ತಲದಲ್ಲಿ ಹಸಿರು ನಿಶಾನೆ

ಪರಸ್ಪರ ಸ್ನೇಹ, ಸೌಹಾರ್ದತೆ ಕಾಯ್ದುಕೊಳ್ಳಲು ಭಾರತ ಮತ್ತು ಬಾಂಗ್ಲಾದೇಶ ಸೇನಾ...

ಅಗರ್ತಲ(ತ್ರಿಪುರಾ): ಪರಸ್ಪರ ಸ್ನೇಹ, ಸೌಹಾರ್ದತೆ ಕಾಯ್ದುಕೊಳ್ಳಲು ಭಾರತ ಮತ್ತು ಬಾಂಗ್ಲಾದೇಶ ಸೇನಾ ಯೋಧರು ಜಂಟಿ ಸೈಕಲ್ ದಂಡ ಯಾತ್ರೆಯನ್ನು ಕೈಗೊಂಡಿದ್ದಾರೆ. ಇದಕ್ಕೆ ಇತ್ತೀಚೆಗೆ ಅಗರ್ತಲಾದ ಮಿಲಿಟರಿ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಾಯಿತು.
ಲೆಫ್ಟಿನೆಂಟ್ ಜನರಲ್ ಎ.ಎಸ್.ಬೇಡಿ, ಗೊಕ್ ಗಜ್ರಾಜ್ ಕಾರ್ಪ್ಸ್, ಯಾತ್ರೆಗೆ ಚಾಲನೆ ನೀಡಿದರು. ಇತಿಹಾಸ, ಭೌಗೋಳಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ತುಂಬಾ ಸಾಮೀಪ್ಯದ ಸಂಬಂಧ ಹಂಚಿಕೊಳ್ಳುತ್ತಿದೆ. ಮಿಲಿಟರಿಯ ಹಿರಿಯ ಅಧಿಕಾರಿಗಳು ಮತ್ತು ತರಬೇತಿ ನೆಲೆಯಲ್ಲಿ ಎರಡೂ ಸೇನೆಗಳು ಪರಸ್ಪರ ಮಾತುಕತೆ, ಚರ್ಚೆ ನಡೆಸುತ್ತವೆ. ಈ ಯಾತ್ರೆಯು ಎರಡೂ ಕಡೆಯ ಸೇನೆಗಳು ತೆಗೆದುಕೊಂಡ ಆಸಕ್ತಿಕರವಾದ ಅಭಿಯಾನವಾಗಿದ್ದು, 1971ರ ವಿಮೋಚನಾ ಯುದ್ಧವನ್ನು ನೆನಪಿಸುತ್ತದೆ ಮತ್ತು ಎರಡೂ ಸೇನೆಗಳ ಸಿಬ್ಬಂದಿ ಪರಸ್ಪರ ಕಲಿಯಲು ಸಹಾಯವಾಗುತ್ತದೆ ಎಂದು ಹೇಳಿದರು.
ಭಾರತ ಮತ್ತು ಬಾಂಗ್ಲಾದೇಶಗಳ ಸೇನಾ ಯೋಧರು ಒಟ್ಟಿಗೆ ಹೀಗೆ ದಂಡಯಾತ್ರೆ ಕೈಗೊಳ್ಳುತ್ತಿರುವುದು ಇದೇ ಮೊದಲು. ದಂಡಯಾತ್ರೆ ತಂಡದಲ್ಲಿ 19 ಮಂದಿ ಸೈನಿಕರು, ಅಧಿಕಾರಿಗಳು, ಜೆಸಿಒಗಳು ಮತ್ತು ಒಆರ್ ಗಳು ಸೇರಿದ್ದಾರೆ. 11 ದಿನಗಳಲ್ಲಿ 532 ಕಿಲೋ ಮೀಟರ್ ದೂರ ಸಂಚರಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT