ಎನ್. ಶಶಿಕಲಾ (40) ಹಾಗೂ ಅನಿಶ್ ಸಾಯಿ 
ದೇಶ

ಅಮೆರಿಕ: ಭಾರತೀಯ ಮೂಲದ ಮಹಿಳೆ, ಮಗ ಶವವಾಗಿ ಪತ್ತೆ

ಭಾರತೀಯ ಮೂಲಕ ಮಹಿಳೆ ಹಾಗೂ ಆಕೆಯ ಮಗ ನ್ಯೂಜೆರ್ಸಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ...

ವಿಜಯವಾಡ: ಭಾರತೀಯ ಮೂಲಕ ಮಹಿಳೆ ಹಾಗೂ ಆಕೆಯ ಮಗ ನ್ಯೂಜೆರ್ಸಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ. 
ಹತ್ಯೆಯಾದವರನ್ನು ಎನ್. ಶಶಿಕಲಾ (40) ಹಾಗೂ ಆಕೆಯ 7 ವರ್ಷದ ಮಗ ಅನಿಶ್ ಸಾಯಿ ಎಂದು ಗುರ್ತಿಸಲಾಗಿದ್ದು, ಶಶಿಕಲಾ ಅವರು ವಿಜಯವಾಡದ ಪ್ರಕಾಸಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ. 
ಹನುಮಂತ ರಾವ್ ಹಾಗೂ ಶಶಿಕಲಾ ದಂಪತಿಗಳು ವೃತ್ತಿಯಲ್ಲಿ ಸಾಫ್ಟ್'ವೇರ್ ಗಳಾಗಿದ್ದು, ಕಳೆದ 9 ವರ್ಷಗಳಿಂದಲೂ ಅಮೆರಿಕದಲ್ಲಿ ನೆಲೆಯೂರಿದ್ದಾರೆ. ಶಶಿಕಲಾ ಅವರು ಮನೆಯಲ್ಲಿದ್ದುಕೊಂಡೇ ಕಚೇರಿಯ ಕೆಲಸಗಳನ್ನು ಮಾಡುತ್ತಿದ್ದರು. ಹನುಮಂತ ಅವರು ನಿನ್ನೆ ಆಫೀಸಿಗೆ ಹೋಗಿ ಮನೆಗೆ ಬಂದಾಗ ಪತ್ನಿ ಮತ್ತು ಮಗ ಇಬ್ಬರೂ ಶವವಾಗಿ ಬಿದ್ದಿರುವುದು ಕಂಡುಬಂದಿದೆ. 
ಕೂಡಲೇ ಅವರು ಉತ್ತರ ಅಮೆರಿಕಾದ ತೆಲುಗು ಸಂಘಟನೆಗೆ ಮಾಹಿತಿ ನೀಡಿದ್ದಾರೆ. ಶಶಿಕಲಾ ಹಾಗೂ ಅನೀಶ್ ನನ್ನು ಕತ್ತುಕೊಯ್ಡು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 
ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಲಾಗಿತ್ತು. ನಂತರ ಉದ್ಯಮಿ ಹಾರ್ನಿಷ್ ಪಟೇಲ್ ರನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿತ್ತು. ಇದಲ್ಲದೆ, ಭಾರತೀಯರೆಂಬ ಕಾರಣಕ್ಕೆ ನಿಂದಿಸಿದ ಕೆಲ ಪ್ರಕರಣಗಳೂ ಕೂಡ ವರದಿಯಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ