ದೇಶ

ಅಂತಾರಾಷ್ಟ್ರೀಯ ಗಡಿಭಾಗಗಳನ್ನು ಮುಚ್ಚುವುದರಿಂದ ಅಕ್ರಮ ಪ್ರವೇಶಗಳ ಮೇಲೆ ನಿಗಾ: ರಕ್ಷಣಾ ವಲಯ ತಜ್ಞರು

Sumana Upadhyaya
ನವದೆಹಲಿ: 2018ರ ವೇಳೆಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚುವ ಕೇಂದ್ರ ಸರ್ಕಾರದ ಯೋಜನೆಯನ್ನು ರಕ್ಷಣಾ ತಜ್ಞರು ಸ್ವಾಗತಿಸಿದ್ದಾರೆ. ಐಸಿಸ್ ಪ್ರೇರಿತ ಭಯೋತ್ಪಾದಕರು ಈ ಗಡಿಗಳೊಳಗೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಒಳನುಸುಳುತ್ತಾರೆ. ಹೀಗಾಗಿ ಗಡಿಭಾಗಗಳನ್ನು ಮುಚ್ಚುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.
ರಕ್ಷಣಾ ತಜ್ಞ ಬ್ರಿಗೇಡಿಯರ್(ನಿವೃತ್ತ) ಅನಿಲ್ ಗುಪ್ತಾ, ಗಡಿ ಮೂಲಕ ಬಾಂಗ್ಲಾದೇಶಿಯರು ಭಾರತದ ಪ್ರಾಂತ್ಯದೊಳಗೆ ಒಳನುಸುಳುವುದರಿಂದ ಅದನ್ನು ನಿವಾರಿಸಲು ಕೇಂದ್ರ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಬರ್ಮಾ ದೇಶದ ಮುಸಲ್ಮಾನರು ಭಾರತದೊಳಕ್ಕೆ ನುಗ್ಗುತ್ತಾರೆ. ಇಸಿಸ್ ಪ್ರೇರಿತ ಭಯೋತ್ಪಾದಕರು ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಅಂತಾರಾಷ್ಟ್ರೀಯ ಗಡಿಯ ಮೂಲಕ ಒಳ ನುಗ್ಗಿ ಇಲ್ಲಿ ತಮ್ಮ ನೆಲೆಯೂರಲು ಪ್ರಯತ್ನಿಸುತ್ತಿವೆ ಎಂದು ಗುಪ್ತಾ ಹೇಳಿದರು.
ಮತ್ತೊಬ್ಬ ರಕ್ಷಣಾ ತಜ್ಞ ಕಮಾಂಡರ್ (ನಿವೃತ್ತ) ಪ್ರಫುಲ್ ಬಕ್ಷಿ ಮಾತನಾಡಿ, ಇಸ್ಲಾಮಾಬಾದ್, ದೆಹಲಿ ಮತ್ತು ಢಾಕಾ ಮಧ್ಯೆ ಇರುವ ಗಡಿಭಾಗಗಳನ್ನು ಸರಿಯಾಗಿ ಮುಚ್ಚಬೇಕು. ಏಕೆಂದರೆ ಈ ಗಡಿಗಳೊಳಗೆ ಅಕ್ರಮ ನುಸುಳುಕೋರರು ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮೂಲಕ ಪ್ರವೇಶಿಸುತ್ತಾರೆ. ಭಾರತಕ್ಕೆ ನಿಜಕ್ಕೂ ಇದು ತಲೆನೋವಾಗಿದೆ ಎಂದರು.
ಅಂತಾರಾಷ್ಟ್ರೀಯ ಗಡಿಭಾಗಕ್ಕೆ ಬೇಲಿ ಹಾಕುಲಾಗುತ್ತದೆ ಎಂದರೆ ಜನರನ್ನು ಗಡಿಭಾಗದ ಮೂಲಕ ಸಂಚರಿಸಲು ಬಿಡುವುದಿಲ್ಲ ಎಂದರ್ಥವಲ್ಲ. ಸರಿಯಾದ ಕಾನೂನು ಕ್ರಮ ಮೂಲಕ ಜನರನ್ನು ಗಡಿ ಮೂಲಕ ಸಂಚರಿಸಲು ಬಿಡಲಾಗುತ್ತದೆ. ಸರಿಯಾದ ದಾಖಲೆಗಳನ್ನು ಇಡಲಾಗುವುದು. ಆ ಮೂಲಕ ಅಕ್ರಮವಾಗಿ ಪ್ರವೇಶಿಸುವವರನ್ನು ಪತ್ತೆಹಚ್ಚಲಾಗುತ್ತದೆ ಎಂದು ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದರು. 
SCROLL FOR NEXT