ಸಾಂದರ್ಭಿಕ ಚಿತ್ರ 
ದೇಶ

ಭಾರತ ನೀರಿನ ಒತ್ತಡ ಹೊಂದಿರುವ ದೇಶ; ನೀರಿಗಾಗಿ ಯುದ್ಧ ನಡೆಯುವ ಸಾಧ್ಯತೆಯಿದೆ

ಬೇಸಿಗೆಯ ಧಗೆ ಬಿಸಿಲಿಗೆ ನೀರಿಗೆ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ...

ನವದೆಹಲಿ: ಬಿಸಿಲಿಗೆ ನೀರಿಗೆ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ನೀರಿನ ಕೊರತೆ ಉಂಟಾಗುತ್ತಿದ್ದು, ರಾಜ್ಯಗಳ ನಡುವೆ ನೀರಿಗಾಗಿ ಜಗಳಗಳು ಆರಂಭವಾಗುವ ಸಾಧ್ಯತೆಯಿದೆ ಎಂದು ಮನಗಂಡಿರುವ ಪ್ರಧಾನ ಮಂತ್ರಿ ಕಚೇರಿ ಕಾರ್ಯಾಲಯ ಎಚ್ಚೆತ್ತುಕೊಂಡಿದೆ.
ನೀರಿನ ಕೊರತೆಯಿಂದಾಗಿ ರಾಜ್ಯಗಳಲ್ಲಿ ಸಮಸ್ಯೆ ಕಾಣಿಸಿಕೊಂಡು ಅದು ಸಾಮಾಜಿಕ ಅಸ್ಥಿರತೆಯನ್ನುಂಟುಮಾಡುವ ಸಾಧ್ಯತೆಯಿದೆ ಎಂದು ಈ ತಿಂಗಳ ಮೊದಲು ಪ್ರಧಾನಿ ಕಚೇರಿಗೆ ಸಲ್ಲಿಸಲಾಗಿದ್ದ 12ನೇ ಪಂಚವಾರ್ಷಿಕ ಯೋಜನೆಯ ಕರಡು ಅಂದಾಜು ವರದಿ ತಿಳಿಸಿದೆ.
1951ರಿಂದ ಜನಸಂಖ್ಯಾ ಬೆಳವಣಿಗೆ ಮತ್ತು ನೀರಿನ ಮೂಲಗಳು ಕುಸಿದು ಹೋಗಿರುವುದರಿಂದ ಪ್ರತಿ ವ್ಯಕ್ತಿಗೆ ಸಿಗುತ್ತಿರುವ ನೀರು ಕಡಿಮೆಯಾಗುತ್ತಿದೆ. ಭಾರತವನ್ನು ನೀರಿನ ಒತ್ತಡವಿರುವ ದೇಶ ಎಂದು ವರ್ಗೀಕರಿಸಲಾಗಿದ್ದು, 2011ರ ಗಣತಿ ಪ್ರಕಾರ, ಪ್ರತಿ ವ್ಯಕ್ತಿಗೆ ಕೇವಲ 1,544 ಕ್ಯೂಬಿಕ್ ಮೀಟರ್ ನೀರು ದೊರೆಯುತ್ತಿದೆ.
ಗ್ರಾಮೀಣ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನೀರಿನ ಬಳಕೆದಾರರಲ್ಲಿ ಘರ್ಷಣೆಯುಂಟಾಗುತ್ತಿದೆ. ಕುಡಿಯುವ ನೀರು, ಕೃಷಿ ಮತ್ತು ಕೈಗಾರಿಕೆಗಳಿಗೆ ಬಳಸುವ ನೀರಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಪರಿಸರ ವ್ಯವಸ್ಥೆಯನ್ನು ಕಾಪಾಡುವುದು ಕೂಡ ಸವಾಲಾಗಿದೆ.
ಹವಾಮಾನ ಬದಲಾವಣೆ ಕೂಡ ನೀರಿನ ಸಂಪನ್ಮೂಲದ ಮೇಲೆ ಪರಿಣಾಮ ಬೀರಿ ಕೊರತೆಯನ್ನುಂಟುಮಾಡುತ್ತದೆ.ಶುದ್ಧ ನೀರಿನ ಸಂಪನ್ಮೂಲ, ಕಡಿಮೆ ನೀರಿನ ಬಳಕೆಯ ದಕ್ಷತೆ, ನೆರೆ, ಪ್ರವಾಹ ಮತ್ತು ನೀರಿನ ಮೂಲ ಸೌಕರ್ಯಗಳ ಸರಿಯಾದ ನಿರ್ವಹಣೆ ಮಾಡದಿರುವುದು ಸಮಸ್ಯೆಯಾಗಿದೆ.
ವಿಶ್ವದ ನೀರಿನ ಮೂಲದಲ್ಲಿ ಶೇಕಡಾ 4ರಷ್ಟು ಮಾತ್ರ ಭಾರತದಲ್ಲಿದೆ. ಅದರಲ್ಲೂ ಬಳಸಬಹುದಾದ ನೀರಿನ ಪ್ರಮಾಣದಲ್ಲಿ ಮಿತಿಯಿದೆ. 2050ರ ವೇಳೆಗೆ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವೆ ಅಂತರ 250 ಶತಕೋಟಿ ಕ್ಯೂಬಿಕ್ ಮೀಟರ್ ವರೆಗೆ ಬೆಳೆಯಬಹುದು. ನೀರಿನ ಕೊರತೆಯಿರುವ ವಿಶ್ವದ ಪ್ರಮುಖ 10 ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಲಿದೆ. 2011ರಲ್ಲಿ ಪ್ರತಿಯೊಬ್ಬರಿಗೆ ಕಡಿಮೆ ನೀರು ಸಿಗುವ 186 ದೇಶಗಳ ಪೈಕಿ ಭಾರತ 30ನೇ ಸ್ಥಾನ ಗಳಿಸಿದೆ.
ಸರ್ಕಾರ ಏನು ಮಾಡಬಹುದು?: ಯೋಜನೆ ಮಟ್ಟದಲ್ಲಿ ನೀರಿನ ನಿರ್ವಹಣೆಗೆ ಸರ್ಕಾರ ತಳಮಟ್ಟದಿಂದ ಕೆಲಸ ಮಾಡಬೇಕಾಗಿದೆ. ನೀರಿನ ವಲಯಗಳ ಸುಧಾರಣೆ, ನೀರಿನ ಮರು ಬಳಕೆ ಮತ್ತು ಮಾಲಿನ್ಯ ನಿಯಂತ್ರಣ ಕಾನೂನುಗಳನ್ನು ಉತ್ತಮ ಆಡಳಿತ ನಡೆಸುವ ಮೂಲಕ ಜಾರಿಗೆ ತರಬೇಕು.
ನೀರು ಪೊಟರೆಯಲ್ಲಿ ಮ್ಯಾಪಿಂಗ್ ಮತ್ತು ನಿರ್ವಹಣೆ ಯೋಜನೆಗೆ ವಿಶೇಷ ಉದ್ದೇಶದ ವಾಹನಗಳನ್ನು ಸ್ಥಾಪಿಸಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT