ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಭಯೋತ್ಪಾದನೆ ಎಂಬುದು ಮನುಕುಲಕ್ಕೆ ದೊಡ್ಡ ಸವಾಲಾಗಿ ಪರಿಗಣಿಸಿದ್ದು, ಪ್ರಾಚೀನ ಗ್ರಂಥ ಮೂಲಕ ಜನರು ಸ್ಫೂರ್ತಿ ಪಡೆದುಕೊಂಡು ಭಯೋತ್ಪಾದನೆ ಎಂಬ ಪಿಡುಗನ್ನು ತೊಲಗಿಸಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಯುಗಾದಿ ಮಿಲನ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಭಯೋತ್ಪಾದನೆ ಎಂಬುದು ಇಂದು ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿದೆ. ಮನುಕುಲಕ್ಕೆ ದೊಡ್ಡ ಸವಾಲಾಗಿದೆ. ಪ್ರಾಚೀನ ಗ್ರಂಥಗಳ ಮುಖಾಂತರ ಸ್ಫೋರ್ತಿಗಳನ್ನು ಪಡೆದುಕೊಂಡು ಅವುಗಳನ್ನು ಪ್ರಸ್ತುತ ಸಂದರ್ಭಕ್ಕೆ ಅಳವಡಿಸಿಕೊಳ್ಳುವ ಮುಖಾಂತರ ಭಯೋತ್ಪಾದನೆಯನ್ನು ತೊಲಗಿಸಬೇಕಿದೆ ಎಂದು ಹೇಳಿದ್ದಾರೆ.
ಜಟಾಯು ಮಾಡಿದ ಹೋರಾಟ ಭಯೋತ್ಪಾದನೆ ವಿರುದ್ಧ ಮೊದಲ ಹೋರಾಟವಾಗಿತ್ತು. ನಿರ್ಭಯತೆಗೆ ಜಟಾಯು ಸಂದೇಶವನ್ನು ನೀಡಿದ್ದ. ವಿವಾದಗಳು, ಸಮಸ್ಯೆಗಳನ್ನು ಭಾರತದ ವೈವಿಧ್ಯತೆ ದೂರವಿಡುತ್ತದೆ ಎಂಬುದನ್ನು ಅರ್ಥ ಮಾಡಿಸಿದ್ದ. ಏಕ್ ಭಾರತ್ ಶ್ರೇಷ್ಠ್ ಭಾರತ್ ನಮ್ಮ ಸರ್ಕಾರದ ಕಹಳೆಯ ದನಿಯಾಗಿತ್ತು. ಇಂದು ಎಲ್ಲಾ ಭಾರತೀಯ ಶಕ್ತಿ ಮತ್ತು ಒಗ್ಗಟ್ಟನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಮಹಿಳೆಯರ ಗೌರವವನ್ನು ಸಮರ್ಥಿಸಿಕೊಂಡು ತನ್ನ ಜೀವನವನ್ನೇ ಜಟಾಯು ತ್ಯಾಗ ಮಾಡಿದ್ದ. ಆತನ ತ್ಯಾಗ ಆತ ಹೋರಾಟ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ ನೀಡುತ್ತದೆ. ಮಾನವತಾವಾದಿಗೆ ಜಟಾಯು ಉತ್ತಮ ಸಂದೇಶವನ್ನು ನೀಡಿದ್ದ ಎಂದಿದ್ದಾರೆ.
ಇದೇ ವೇಳೆ ಯುಗಾದಿ ಹಬ್ಬದ ಕುರಿತಂತೆ ಮಾತನಾಡಿದ ಅವರು, ಭಾರತದ ವೈವಿಧ್ಯತೆ ದೇಶದ ಗುರುತು ಹಾಗೂ ಶಕ್ತಿಯನ್ನು ಹೆಚ್ಚಿಸಿದೆ. ಹಬ್ಬಗಳು ಪ್ರಕೃತಿಯ ಬದಲಾವಣೆಯ ಒಂದು ಪ್ರತಿಬಿಂಬವಾಗಿದೆ. ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ಒಂದಕ್ಕೊಂದು ಕೊಂಡಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ರವಿ ಶಂಕರ್ ಪ್ರಸಾದ್ ಹಾಗೂ ಇನ್ನಿತರೆ ಕೇಂದ್ರ ಸಚಿವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಕಲಾವಿದರು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos