ದೇಶ

ಆಧಾರ್ ಕಾರ್ಡು ಮುಖ್ಯ, ಆದರೆ ಕಡ್ಡಾಯವಲ್ಲ: ರವಿಶಂಕರ್ ಪ್ರಸಾದ್

Sumana Upadhyaya
ನವದೆಹಲಿ: ಬಡವರ ಪರವಾದ ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಆಧಾರ್ ಕಾರ್ಡು ಮೂಲಕ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಆಧಾರ್ ಕಾರ್ಡು ಹೊಂದಿರುವುದು ಮುಖ್ಯವಾಗಿದ್ದರೂ ಕೂಡ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳಲು ಅದು ಕಡ್ಡಾಯವಲ್ಲ ಎಂದು ಕೇಂದ್ರ ಕಾನೂನು ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಆಧಾರ್ ಕಾರ್ಡು ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಉಳಿದಿರುವ ವಿಚಾರಣೆ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ. ಆದರೆ ಬಡವರ ಪರವಾದ ಅನೇಕ ಸರ್ಕಾರಿ ಯೋಜನೆಗಳನ್ನು ಆಧಾರ್ ಮೂಲಕ ನೀಡಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಆದರೆ ಆಧಾರ್ ಕಡ್ಡಾಯವೇನು ಅಲ್ಲ ಎಂದು ಅವರು ತಿಳಿಸಿದರು.
ಆಧಾರ್ ಸಿಗದಿದ್ದರೆ ಇತರ ಗುರುತು ಪತ್ರಗಳಾದ ವಾಹನ ಚಾಲನಾ ಪರವಾನಗಿ ಪತ್ರ, ರೇಷನ್ ಕಾರ್ಡುಗಳನ್ನು ಕೂಡ ಸರ್ಕಾರಿ ಪ್ರಯೋಜನಕ್ಕೆ ಬಳಸಬಹುದು. ಸಂಸತ್ತಿನಲ್ಲಿ ಅನುಮೋದಿಸಲಾದ ಕಾನೂನಿನಂತೆ ಜನರ ಖಾಸಗಿತನ ಮತ್ತು ಸುರಕ್ಷತೆ ಕಡೆಗೆ ಗಮನ ಹರಿಸುತ್ತೇವೆ ಎಂದರು.
ನಿನ್ನೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವದೇಕರ್, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಆಧಾರ್ ಸಂಖ್ಯೆಯನ್ನು ಬಳಸುವ ಕ್ರಮ ತೆಗೆದುಕೊಳ್ಳಲಾಗಿದೆ. ಅಕ್ರಮವನ್ನು ತಡೆದು ಯೋಜನೆಯಲ್ಲಿ ಪಾರದರ್ಶಕತೆ ತರುವುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದರು.
SCROLL FOR NEXT