ದೇಶ

ಅಟ್ಟಾರಿ-ವಾಘಾ ಗಡಿಯಲ್ಲಿ ತ್ರಿವರ್ಣ ಧ್ವಜ ಬದಲಾವಣೆ: ತನಿಖೆಗೆ ಎಟಿಐ ಆಗ್ರಹ

Srinivas Rao BV
ಅಮೃತ್ ಸರ: ಅಟ್ಟಾರಿ-ವಾಘಾ ಗಡಿಯಲ್ಲಿ 350 ಅಡಿ ಎತ್ತರದ ಧ್ವಜಸ್ತಂಭದಲ್ಲಿರುವ ತ್ರಿವರ್ಣ ಧ್ವಜ ಹರಿದಿದ್ದು, ಧ್ವಜ ಬದಲಾವಣೆ ಮಾಡಲಾಗಿದೆ. ಧ್ವಜ ಬದಲಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ತನಿಖೆಗೆ ನಡೆಸಬೇಕೆಂದು ಧ್ವಜಸ್ತಂಭವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿರುವ ಅಮೃತ್ ಸರ ಅಭಿವೃದ್ಧಿ ಸಂಸ್ಥೆ (ಎಐಟಿ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. 
ಅತಿ ಹೆಚ್ಚು ರಭಸದಲ್ಲಿ ಗಾಳಿ ಬೀಸುವುದರಿಂದ ಧ್ವಜ ಹರಿದಿದ್ದು, ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಧ್ವಜಸ್ತಂಭ ನಿರ್ಮಾಣ ಮಾಡಬೇಕಾದರೆ ತಾಂತ್ರಿಕ ಅಂಶಗಳನ್ನು ಪರಿಗಣಿಸಿಲ್ಲ ಎಂಬ ಆರೋಪ ಈಗ ಕೇಳಿಬರುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದೂ, ಧ್ವಜದ ಗುಣಮಟ್ಟವನ್ನು ಪರಿಶೀಲಿಸಬೇಕೆಂದೂ ಎಐಟಿ ಕೇಂದ್ರ ಸರ್ಕಾರವನ್ನು ಕೋರಿದೆ. 
ಸುಮಾರು 1.25 ಲಕ್ಷ ವೆಚ್ಚದಲ್ಲಿ ಮಾ.5 ರಂದು ಆರೋಹಣವಾಗಿದ್ದ ತ್ರಿವರ್ಣ ಧ್ವಜ ಗಾಳಿಯ ರಭಸಕ್ಕೆ ಸಿಲುಕಿ ಹರಿದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಟಿ ಅಧ್ಯಕ್ಷ ಸುರೇಶ್ ಮಹಾಜನ್ ತಾಂತ್ರಿಕ ಅಂಶಗಳನ್ನು ಪರಿಗಣಿಸದೇ ಯೋಜನೆಯನ್ನು ಆತುರದಲ್ಲಿ ಜಾರಿಗೊಳಿಸಲಾಗಿದೆ. ಇದೊಂದು ಅಪರಾಧವಾಗಿದ್ದು ರಾಷ್ಟ್ರಧ್ವಜ ನಮ್ಮ ದೇಶದ ಹೆಮ್ಮೆಯಾಗಿರುವುದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದರೊಂದಿಗೆ ಇನ್ನು ಮುಂದಿನ ದಿನಗಳಲ್ಲಿ ರಭಸದ ಗಾಳಿಗೆ ಧ್ವಜ ಹರಿಯದಂತೆ ಎಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 
SCROLL FOR NEXT