ದೇಶ

ಸೂರ್ಯ ನಮಸ್ಕಾರ ಮತ್ತು ನಮಾಜ್ ನಡುವೆ ಸಾಮ್ಯತೆ ಇದೆ: ಸಿಎಂ ಯೋಗಿ ಆದಿತ್ಯನಾಥ್

Shilpa D

ಲಕ್ನೋ: ಸೂರ್ಯ ನಮಸ್ಕಾರ ಮತ್ತು ನಮಾಜ್ ನಡುವೆ ಬಹಳಷ್ಟು ಸಾಮ್ಯತೆಗಳಿವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶ ಯೋಗ ಮಹೋತ್ಸವದಲ್ಲಿ ಮಾತನಾಡಿದ ಆದಿತ್ಯನಾಥ್, ಸೂರ್ಯ ನಮಸ್ಕಾರ ಮತ್ತು ನಮಾಜ್‍ ಮಾಡುವಾಗ ದೇಹದ ಭಂಗಿಗಳಲ್ಲಿ ಬಹುತೇಕ ಸಾಮ್ಯತೆಯುಳ್ಳವುಗಳಾಗಿವೆ ಎಂದಿದ್ದಾರೆ.

ಯೋಗ ಮತ್ತು ಸೂರ್ಯ ನಮಸ್ಕಾರ ಮಾಡುವುದು  ಧರ್ಮ ವಿರೋಧಿ, ನಮ್ಮ ಧರ್ಮದಲ್ಲಿ ಇಂಥಹ ಅಭ್ಯಾಸ ರೂಢಿಸಿಕೊಳ್ಳಲು ಬಿಡುವುದಿಲ್ಲ ಎಂದು ಅನೇಕ ಮುಸ್ಲಿಂ ಸಂಘಟನೆಗಳು ವಿರೋಧಿಸುತ್ತವೆ ಎಂದು ಹೇಳಿದ್ದಾರೆ.

ಯೋಗಕ್ಕೆ ಉತ್ತೇಜನ ನೀಡಲು ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಆಯುಷ್ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದ ಯೋಗಿ ಆದಿತ್ಯನಾಥ್, ಈ ಮೊದಲು ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೇ  ಅದನ್ನು ಕೋಮುವಾದ ಎಂಬಂತೆ ಬಿಂಬಿಸಲಾಗುತ್ತಿತ್ತು ಎಂದು ಅವರು ಹೇಳಿದರು.

ಸೂರ್ಯ ನಮಸ್ಕಾರ ಮತ್ತು ನಮಾಜ್ ನ ಹಲವು ಭಂಗಿಗಳಲ್ಲಿ ಸಾಮ್ಯತೆಗಳಿವೆ, ಆದರೆ ಎರಡನ್ನು ಒಟ್ಟಿಗೆ ತರಲು ಇದುವರೆಗೂ ಪ್ರಯತ್ನ ಮಾಡಿಲ್ಲ ಎಂದು ಹೇಳಿದ ಅವರು, ಕೆಲ ಜನರಿಗೆ  ಮತಗಳ ಉಪಯೋಗದ ಬಗ್ಗೆ ತಿಳಿದಿತ್ತು, ಅವರಿಗೆ ಯೋಗದ ಮಹತ್ವದ ಬಗ್ಗೆ ಗೊತ್ತಿರಲಿಲ್ಲ, ಹೀಗಾಗಿ ಅವರು ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸಿದರು ಎಂದು ಆರೋಪಿಸಿದರು.

SCROLL FOR NEXT